ಕಾಸರಗೋಡು: ರಾಜ್ಯ ಸರಕಾರದ ಯೋಜನೆಗಳ ಜಾರಿಯಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. 2018-19 ನೇ ಆರ್ಥಿಕ ವರ್ಷದಲ್ಲಿ ಶೇ.93.62 ಪ್ರಗತಿಯನ್ನು ಜಿಲ್ಲೆ ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
38 ಇಲಾಖೆಗಳಿಗಾಗಿ ಮಂಜೂರು ಮಾಡಿರುವ 19957.66 ಲಕ್ಷ ರೂ.ನಲ್ಲಿ 18683.96 ಲಕ್ಷ ರೂ. ವೆಚ್ಚಮಾಡಲಾಗಿದ್ದು, ಈ ಸಾಧನೆ ನಡೆಸಿದೆ. ಯೋಜನೆ ಮೊಬಲಗಿನಲ್ಲಿ 15 ಇಲಾಖೆಗಳು ಶೇ.100 ವೆಚ್ಚಮಾಡಿವೆ. 18 ಇಲಾಖೆಗಳು ಶೇ.18ಕ್ಕಿಂತ ಅಧಿಕ ವೆಚ್ಚಮಾಡಿವೆ. 5 ಇಲಾಖೆಗಳು ಶೇ.50ಕ್ಕಿಂತ ಅಧಿಕ ವೆಚ್ಚ ಮಾಡಿವೆ.
ಕೇಂದ್ರ ಸರಕಾರಿ ಯೋಜನೆಗಳ ಜಾರಿಯಲ್ಲೂ ಜಿಲ್ಲೆಯದು ಗಮನಾರ್ಹ ಸಾಧನೆ :
ಇದೇ ವೇಳೆ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲೂ ಕಾಸರಗೋಡು ಗಮನಾರ್ಹ ಸಾಧನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶೇ.100 ಕೇಂದ್ರ ಸರಕಾರಿ ಯೋಜನೆಗಳನ್ನು ಜಾರಿಗೊಸಳಿದ ಜಿಲ್ಲೆಯ 6 ಇಲಾಖೆಗಳು, ಮಂಜೂರು ಮಾಡಲಾದ 1166.08 ಲಕ್ಷ ರೂ.ನಲ್ಲಿ 1024.17 ಲಕ್ಷ ರೂ. ವೆಚ್ಚ ಮಾಡಿ ಶೇ.87.83 ಪ್ರಗತಿಯನ್ನು ಸಾಧಿಸಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದಿದೆ. ಯೋಜನೆ ಮೊಬಲಗಿನಲ್ಲಿ ಶೇ.100 ವೆಚ್ಚಮಾಡಿದ ಒಂದು ಇಲಾಖೆ ಮತ್ತು ಶೇ.80ಕ್ಕಿಂತ ಅಧಿಕ ಮೊಬಲಗು ವೆಚ್ಚ ಮಾಡಿದ ಎರಡು ಇಲಾಖೆಗಳು, ಶೇ.40ಕ್ಕಿಂತ ಅಧಿಕ ವೆಚ್ಚ ಮಾಡಿರುವ ಮೂರು ಇಲಾಖೆಗಳೂ ಜಿಲ್ಲೆಯಲ್ಲಿವೆ.
ಇತರ ಕೇಂದ್ರ ಸರಕಾರಿ ಯೋಜನೆಗಳಲ್ಲಿ ಜಿಲ್ಲೆಯ 13 ಇಲಾಖೆಗಳಿಗೆ ಮಂಜೂರು ಮಾಡಲಾದ 16998.68 ಲಕ್ಷ ರೂ.ನಲ್ಲಿ 16968.96 ಲಕ್ಷ ರೂ. ವೆಚ್ಚ ಮಾಡಿ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಯೋಜನೆ ಮೊಬಲಗಿನಲ್ಲಿ ಶೇ.100 ವೆಚ್ಚಮಾಡಿರುವ 9 ಇಲಾಖೆಗಳು, ಶೇ.60ಕ್ಕಿಂತ ಅಧಿಕ ವೆಚ್ಚಮಾಡಿರುವ ಮೂರು ಇಲಾಖೆಗಳು, ಶೇ.60ಕ್ಕಿಂತ ಕಡಿಮೆ ವೆಚ್ಚ ಮಾಡಿರುವ ಒಂದು ಇಲಾಖೆ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.