HEALTH TIPS

ವಿದ್ಯುತ್ ಲೋಡ್ ಶೆಡ್ಡಿಂಗ್, ಪವರ್‍ಕಟ್ ಇಲ್ಲ= ಕೇರಳ ವಿದ್ಯುತ್ ಮಂಡಳಿ ನಿರ್ಧಾರ

       

    ಕಾಸರಗೋಡು: ಕೇರಳದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್, ಪವರ್‍ಕಟ್ ಇತ್ಯಾದಿ ಯಾವುದೇ ರೀತಿಯ ವಿದ್ಯುತ್ ನಿಯಂತ್ರಣ ಏರ್ಪಡಿಸದಿರಲು ರಾಜ್ಯ ವಿದ್ಯುತ್ ಮಂಡಳಿಯು ತಿಳಿಸಿದೆ. ಈ ಬಾರಿಯ ಕಡು ಬೇಸಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ಮಿತಿಮೀರಿದ್ದರೂ ಅದಕ್ಕೆ ಹೊಂದಿಕೊಂಡು ರಾಜ್ಯದಲ್ಲಿ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ಈ ನಿರ್ಧಾರ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ನಿಯಂತ್ರಣವಾಗಲಿ ಅಥವಾ ಅಘೋಷಿತ ಪವರ್‍ಕಟ್ ಆಗಲಿ ಹೇರದಿರಲು ವಿದ್ಯುತ್ ಮಂಡಳಿಯು ನಿರ್ಧರಿಸಿದೆ. ವಿದ್ಯುತ್ ವಿಷಯದಲ್ಲಿ ಕೇರಳದಲ್ಲಿ ಆತಂಕಪಡುವ ಪರಿಸ್ಥಿತಿ ಈಗ ಖಂಡಿತಾ ಇಲ್ಲ. ಅಗತ್ಯದಷ್ಟು ವಿದ್ಯುತ್‍ನ್ನು ಹೊರಗಿನಿಂದ ತಂದು ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸಲಾಗಿದೆ ಎಂದು ಅಧಿಕ್ಥರು ತಿಳಿಸಿದ್ದಾರೆ.
     ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರ್ಮರ್) ಮತ್ತು ವಿದ್ಯುತ್ ಲೈನ್‍ಗಳ ದುರಸ್ತಿ ಕೆಲಸಗಳಿದ್ದಲ್ಲಿ ಮಾತ್ರವೇ ಅಂತಹ ಪ್ರದೇಶಗಳಲ್ಲಿ ಆ ಕೆಲಸ ಮುಗಿಯುವ ತನಕ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಚುನಾವಣ ನೀತಿ ಸಂಹಿತೆ ಹಾಗೂ ಬಿಸಿಲ ಬೇಗೆಯನ್ನು ಪರಿಗಣಿಸಿ ಹೆಚ್ಚಿನ ಎಲ್ಲ ದುರಸ್ತಿ ಕೆಲಸಗಳನ್ನೆಲ್ಲ ಈಗ ಮುಂದೂಡಲಾಗಿದೆ ಎಂದು ಮಂಡಳಿಯು ಹೇಳಿದೆ. ಅತಿ ಅಗತ್ಯದ ದುರಸ್ತಿಗಳನ್ನು ಮಾತ್ರ ಈಗ ನಿರ್ವಹಿಸಲಾಗುತ್ತಿದೆ.
     ಇದೇ ವೇಳೆ ಕೇರಳದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಹೆಚ್ಚಿನ ಜಿಲ್ಲೆಗಳಲ್ಲೂ ತಲೆದೋರತೊಡಗಿದೆ. ವಿದ್ಯುತ್ ಲೈನ್‍ಗಳಲ್ಲಿ ಲೋಡ್ ಹೆಚ್ಚಾಗುತ್ತಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ. ಕೇರಳದ ವಿದ್ಯುತ್ ಲೈನ್ ಮತ್ತು ಲೈಟ್‍ಗಳು ಹಳೆಯ ಕಾಲದ್ದಾಗಿವೆ. ಹೆಚ್ಚಿನವುಗಳನ್ನು ಈ ತನಕ ಬದಲಾಯಿಸಿಲ್ಲ. ಅಲ್ಲದೆ ಅಧಿಕ ಸಾಮಥ್ರ್ಯದ ಲೈನ್ ಅಳವಡಿಸಲು ಮಂಡಳಿಯು ಮೀನಮೇಷ ಎಣಿಸುತ್ತಿದೆ.
    ಇದರಿಂದಾಗಿ ಹೆಚ್ಚು ವಿದ್ಯುತ್ ಲಭಿಸಿದರೂ ಅದನ್ನು ಜನರಿಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಅಗತ್ಯದಷ್ಟು ಹೊರರಾಜ್ಯಗಳಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಹೊರಗಿನಿಂದ ಯೂನಿಟ್‍ಗೆ ಸರಾಸರಿ 4ರಿಂದ 5ರೂ. ವರೆಗೆ ಹಣ ನೀಡಿ ವಿದ್ಯುತ್ ಖರೀದಿಸಲಾಗುತ್ತಿದೆ.
    ರಾಜ್ಯದ ಜಲ ವಿದ್ಯುತ್ ಯೋಜನೆಗಳ ಅಣೆಕಟ್ಟುಗಳಲ್ಲಿ ಈಗ ಅಗತ್ಯದ ನೀರು ಇದೆ ಎಂದು ವಿದ್ಯುತ್ ಮಂಡಳಿಯು ಮಾಹಿತಿ ನೀಡಿದೆ. ಇಡುಕ್ಕಿ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಹೊಸ ಜಲ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.
      ಅಭಿಮತ: 
   ಈ ಬಾರಿ ಕೇರಳದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಅದರೊಂದಿಗೆ ವಿದ್ಯುತ್ ಬಳಕೆಯೂ ಅಧಿಕವಾಗಿದೆ. ಅಲ್ಲದೆ ಉತ್ಪಾದನಾ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ಆದರೂ ಹೊರರಾಜ್ಯಗಳಿಂದ ವಿದ್ಯುತ್ ಸರಬರಾಜು ಸಮರ್ಥವಾಗಿ ನಡೆಯುತ್ತಿರುವುದರಿಂದ ಪವರ್‍ಕಟ್ ಮಾಡದಿರಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯೂ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂತನ ವಿದ್ಯುತ್ ಯೋಜನೆಗಳನ್ನು ಕಾರ್ಯ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
          ಎನ್.ಎಸ್.ಪಿಳ್ಳೆ, ಅಧ್ಯಕ್ಷರು, ಕೇರಳ ರಾಜ್ಯ ವಿದ್ಯುತ್ ಮಂಡಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries