ಮಧೂರು: ಉತ್ತಮ ಕೆಲಸಗಳನ್ನು ಮಾಡಿಮುಗಿಸಲೆಂದು ಸಮಯವು ಕಾಯುತ್ತಾ ಕುಳಿತಿರುವುದಿಲ್ಲ. ಯಾವಾಗ ಅವಕಾಶ-ಸಾಮಥ್ರ್ಯಗಳಿರುವುದೋ ಆಗಲೇ ಮನಷ್ಯನು ಒಳ್ಳೆಯ ಕೆಲಸಗಳನ್ನು ಮಾಡಿಮುಗಿಸಬೇಕೆಂದು ಹಿರಿಯ ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯಪಟ್ಟರು.
ಸ್ಥಳೀಯ ಶಿವಾಜಿಕಲಾಸಂಘದ ಇತ್ತೀಚೆಗೆ ನಡೆದ 47 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ರಾಂ ಎಲ್ಲಂಗಳ ಹಾಗೂ ಮನೋಹರ ಎ. ಅವರನ್ನು ಶಾಲು ಹೊದಿಸಿ, ಸ್ಮರಣಿಕೆಗಳನ್ನಿತ್ತು ಫಲತಾಂಬೂಲಾದಿಗಳನ್ನು ನೀಡಿ ಗೌರವಿಸಿ ಅವರು ಮಾತನಾಡಿದರು.
ಇಲ್ಲಿನ ಕೊಲ್ಯದಲ್ಲಿರುವ ಸಂಘದ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಸರಗೋಡಿನ ಸಹಾಯಕ ಜಿಲ್ಲಾಧಿಕಾರಿ ಜಯಲಕ್ಷ್ಮೀ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಪ್ರಭಾಶಂಕರ್ ಎ. ಹಾಗು ಮಧೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ್ದುಪಸ್ಥಿತರಿದ್ದು ಶುಭ ಹಾರೈಸಿದರು.
ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದರೂ, ಚಿಂತಕ, ಕವಿಗಳೂ, ಆಕಾಶವಾಣಿ ಕಲಾವಿದರೂ ಆದ ರಾಂ ಎಲ್ಲಂಗಳ ಹಾಗು ಪ್ರಸಿದ್ಧ ಸಮಾಜಸೇವಕರೂ, ಕಲಾವಿದರೂ ಆದ ಮನೋಹರ ಎ. ಅವರು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕೆ.ನಾರಾಯಣ್ಯ ಹಾಗು ಉಮೇಶ್ ನಾೈಕ್ ಸಮ್ಮಾನಿತರನ್ನು ಪರಿಚಯಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸಾಂಸ್ಕøತಿಕ ಹಾಗು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಅತಿಥಿ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಕ್ರೀಡಾ ಕಾರ್ಯದರ್ಶಿ ಸತೀಶ್ ಶೆಟ್ಟಿ ವಿಜೇತರ ಹೆಸರನ್ನು ಓದಿದರು. ಸಮಾರಂಭದ ನಂತರ ಸಂಘದ ಸದಸ್ಯರಿಂದ ನೃತ್ಯ, ನೃತ್ಯ ರೂಪಕಗಳು ಪ್ರದರ್ಶನಗೊಂಡಿತು. ಸಂಘದ ಅಧ್ಯಕ್ಷ ಅವಿನಾಶ್ ಕೊರ್ಜಾಲ್ ಸ್ವಾಗತಿಸಿ, ಎ.ಗೋಪಾಲ ನಾೈಕ್ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಆಳ್ವ ಸಂಘದ ಗತವರ್ಷದ ವರದಿಯನ್ನು ಮಂಡಿಸಿದರು. ನರಸಿಂಹ ಮಯ್ಯ ಎಂ. ಮಧೂರು ಕಾರ್ಯಕ್ರಮ ನಿರೂಪಿಸಿದರು.