ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರ ನಾರಾಯಣ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ರಮ್ಯಶ್ರೀ ಅಂಬಕಾನ ಮತ್ತು ಬಳಗದವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ಜರಗಿತು.
ಹಾಡುಗಾರಿಕೆಯಲ್ಲಿ ಯುವ ಸಂಗೀತ ಪ್ರತಿಭೆಗಳಾದ ರಮ್ಯಶ್ರೀ, ಯಶಸ್ವಿನಿ, ಅವನಿ ಪಾಂಡೇಲು, ಅಭಿಜ್ಞಾ, ನಂದಿತಾ ಹಾಗು ಸುಶಾಂತ್ ಕುಂಟಿಕಾನ ಉತ್ತಮವಾಗಿ ಹಾಡಿ ಭಕ್ತಾಭಿಮಾನಿಗಳನ್ನು ರಂಜಿಸಿದರು. ಸುಧಾಕರ ಕನ್ಯೆಪ್ಪಾಡಿ ಅವರು ಪುಟಾಣಿ ಕಲಾವಿದರಿಗೆ ಪೆÇ್ರೀತ್ಸಾಹಕ ಬಹುಮಾನಗಳನ್ನು ನೀಡಿ ಅಭಿನಂದಿಸಿದರು.