ನವದೆಹಲಿ: ಜಾರ್ಜಿಯಾದ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಫಾಕಿಸ್ತಾನದ ಮೂಲಕ ದೇಶವನ್ನು ಪ್ರವೇಶಿಸಿದ್ದು ಇದನ್ನು ಭಾರತೀಯ ವಾಯುಪಡೆ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತದಿಂದ ಇಳಿಸಿರುವ ಘಟನೆ ನಡೆದಿದೆ.
ಜಾರ್ಜಿಯಾದ ಆಂಟೊನೊವ್ ಎಎನ್-12 ಬೃಹತ್ ಸರಕು ಸಾಗಣೆ ವಿಮಾನವನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಜೈಪುರದಲ್ಲಿ ಇಳಿಸಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.
ಐಎಎಫ್ ನ ವಾಯು ರಕ್ಷಣಾ ವಿಮಾನದಿಂದ ವಿಮಾನವನ್ನು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಲು ಬಲವಂತದ ಸೂಚನೆ ನಿಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನವು ಉತ್ತರ ಗುಜರಾತ್ ನಲ್ಲಿ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದೆ. ಇದನ್ನು ಗಮನಿಸಿದ ವಾಯುಸೇನೆ ತಕ್ಷಣ ಎಚ್ಚರಗೊಂಡು ಐಎಎಫ್ ಏರ್ ಡಿಫೆನ್ಸ್ ಏಕ್ರ್ರಾಫ್ಟ್ ಮೂಲಕ ವಿಮಾನವನ್ನು ಪ್ರತಿಬಂಧಿಸಿ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಸಿದೆ."ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.