ಮಂಜೇಶ್ವರ: ಇಚ್ಲಂಗೋಡು ಶ್ರೀನಾಗಬ್ರಹ್ಮ ಕೋಮಾರು ಚಾಮುಂಡಿ ದೈವಸ್ಥಾನದ ಇಡಿಯ ವಿಭಾಗದ ತರವಾಡು ಗೃಹಪ್ರವೇಶ ಹಾಗೂ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ಸೋಮವಾರ ಜರಗಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ನವೀನ್ ರಾಜ್ ಕೆ.ಜೆ, ವಾಮನ ಸಾಗ್ ಮುಳಿಂಜ, ಬಿ.ಎಂ.ಕಮಲ ಹೊಸಬೆಟ್ಟು, ತುಳಸೀದಾಸ್ ಮಂಜೇಶ್ವರ, ಸದಾಶಿವ ಕಡಂಬಾರ್, ಸೀತಾರಾಮ ಅಂಗಡಿಪದವು, ಸುರೇಶ್ ಮಂಗಲ್ಪಾಡಿ, ರುಕ್ಮಯ ಅಂಗಡಿಪದವು, ನಾರಾಯಣ ಪಣಂಬೂರು, ಗೋಪಾಲ ಕೊಡ್ಲಮೊಗರು, ಲಕ್ಷ್ಮೀ ಕುಳಾಯಿ, ನಾರಾಯಣ ಕಾಸರಗೋಡು, ಕೇಶವ ಇಡಿಯ, ಸುಮತಿ ಪಾಂಡೇಶ್ವರ, ಆನಂದ ಅಂಗಡಿಪದವು, ಸುರೇಶ್ ಮಳಿ, ಕೇಶವ ಅಂಗಡಿಪದವು, ಸುಂದರ ಕುಳೂರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಕೇಶವ ಇಡಿಯ ದಂಪತಿಗಳು ಹಾಗೂ ದೈವಪಾತ್ರಿ ಸುರೇಶ್ ಮಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಣೇಶ್ ಕೊಡ್ಲಮೊಗರು ಸ್ವಾಗತಿಸಿ, ರಾಜೇಶ್ ಕೊಡ್ಲಮೊಗರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬನ್ನಂಗಳ ತರವಾಡು ಸೇವಾ ಸಮಿತಿಯಿಂದ ಮತ್ತು ವಿಷ್ಣುಮೂರ್ತಿ ಭಜನಾ ಸಂಘ ಕಡಂಬಾರ್ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಸಂಜೆ ಗುಳಿಗ ದೈವದ ಕೋಲ, ರಾತ್ರಿ 9 ರಿಂದ ಎಸ್.ವಿ.ಮೆಲೊಡೀಸ್ ಹೊಸಂಗಡಿ ತಮಡದವರಿಂದ ಸಂಗೀತ ರಸಮಂಜರಿ, ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಿತು. ಬಳಿಕ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವ, ಅಣ್ಣಪ್ಪ ಪಂಜುರ್ಲಿ, ಕೊರತಿ ದೈವಗಳ ಕೋಲ ನಡೆಯಿತು.