HEALTH TIPS

ಲೋಕಸಭೆ ಚುನಾವಣೆ ಫಲಿತಾಂಶ ತಿಳಿಯಲು ಸಹಕಾರಿ ಟ್ರೆಂಡ್ ಮೊಬೈಲ್ ಆಪ್

 
      ಕಾಸರಗೋಡು: ಲೋಕಸಭೆ ಚುನಾವಣೆಯ ಫಲಿತಾಂಶ ನೇರವಾಗಿ ತಿಳಿಯಲು ನ್ಯಾಷನಲ್ ಇನ್ ಫಾರ್ಮೆಟಿಕ್ ಸೆಂಟರ್ ನ ಟ್ರೆಂಡ್ ಮೊಬೈಲ್ ಆಪ್ ಸಹಕಾರಿಯಾಗಲಿದೆ. ನಾಳೆ(ಮೇ 23) ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ನಡೆಯುವ ಮತಗಣನೆಯ ಫಲಿತಾಂಶವನ್ನು ತಕ್ಷಣ ಈ ಆಪ್ ಮೂಲಕ ಸಾರ್ವಜನಿಕರು ತಿಳಿದುಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟ್ರೆಂಡ್ ಕೇರಳ ಎಂದು ಸರ್ಚ್ ನಡೆಸಿ ಈ ಆಪ್ ಡೌನ್ ಲೋಡ್ ನಡೆಸಬಹುದಾಗಿದೆ. ಮತಗಣನೆ ಕೇಂದ್ರದಲ್ಲಿ ಎನ್.ಐ.ಸಿ. ವತಿಯಿಂದ ಪ್ರತ್ಯೇಕ ರೀತಿ ಸಜ್ಜುಗೊಳಿಸಿದ ತಾಂತ್ರಿಕ ತಂಡ ಈ ಆಪ್ ಗೆ ಮಾಹಿತಿ ಯಥಾ ಸಮಯ ಅಪ್ ಲೋಡ್ ನಡೆಸುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries