ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದ್ರವ್ಯಕಲಶ ಮಹೋತ್ಸವ ನಡೆಯುತ್ತಿದ್ದು ಈ ಸಂದರ್ಭದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ಭಕ್ತ ಸುಧನ್ವ ಎಂಬ ಕಥಾನಕವನ್ನು ಪ್ರದರ್ಶಿಸಲಾಯಿತು. ಮುಮ್ಮೇಳದಲ್ಲಿ ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ವೃಷಕೇತುವಾಗಿ ಉಪಾಸನಾ ಪಂಜರಿಕೆ, ಪ್ರದ್ಯುಮ್ನನಾಗಿ ಅಭಿಜ್ಞಾ ಭಟ್ ಬೊಳುಂಬು, ಹಂಸಧ್ವಜನಾಗಿ ಪ್ರಭಾವತಿ ಕೆದಿಲಾಯ, ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸುಧೀರ್, ಕೃಷ್ಣನಾಗಿ ಶರಣ್ಯ ಕುಂಟಿಕಾನ ಪಾತ್ರಗಳಲ್ಲಿ ಮಿಂಚಿದರು. ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಮುರಳಿ ಮಾಧವ ಮಧೂರು ಹಾಗೂ ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಮುಳ್ಳೇರಿಯ ಹಿಮ್ಮೇಳ ಸಾಥಿ ನೀಡಿದರು. ರಾಜೇಂದ್ರ ವಾಂತಿಚ್ಚಾಲು ಮತ್ತು ಗಿರೀಶ್ ಕುಂಪಲ ಅವರು ನೇಪಥ್ಯದಲ್ಲಿ ಸಹಕರಿಸಿದರು.