ಬದಿಯಡ್ಕ: ಇತಿಹಾಸ ಪ್ರಸಿದ್ಧವಾದ ಪುತ್ರಕಳ ಬೂಡು ಹಾಗೂ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು. ಇದರ ಅಂಗವಾಗಿ ಬೂಡಿನ ತಂತ್ರಿ ಮನೆತನದ ಅರವಿಂದ ಕುಮಾರ ನೇರಪ್ಪಾಡಿ ಅವರ ನೇತೃತ್ವದಲ್ಲಿ ತಂತ್ರಿಗಳಾದ ಬಿ.ಎಸ್.ಕಡಮಣ್ಣಾಯರ ಮಾರ್ಗದರ್ಶನದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ಜರಗಿತು.
ಬುಧವಾರ ಬೆಳಿಗ್ಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ, ಬಳಿಕ ಶ್ರೀದುರ್ಗಾ ಬಾಲ ಗೋಕುಲ ಏತಡ್ಕ ಅವರಿಂದ ಭಜನಾ ಸೇವೆ , ಬಳಿಕ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಅಷ್ಟದ್ರವ್ಯ ಸಹಿತ 108ಕಾಯಿ ಗಣಪತಿಹೋಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ತಂತ್ರಿವರ್ಯರಾದ ರವೀಶ ತಂತ್ರಿ ಕುಂಟಾರು, ಬಿ.ಎಸ್.ಕಡಮಣ್ಣಾಯ, ಕುಂಬ್ಡಾಜೆ ಬೀಡಿನ ಹಿರಿಯರಾದ ತಿಮ್ಮಪ್ಪ ರೈ, ಅರವಿಂದ ಕುಮಾರ್ ಅಲೆವೂರಾಯ ನೇರಪ್ಪಾಡಿ,ರಾಜೇಶ್ ಆಳ್ವ ಬದಿಯಡ್ಕ, ಬಾಲಕೃಷ್ಣ ಕೆ ಕೆ ಕುಂಡಾಪು, ಗಣಪತಿ ಭಟ್ ಏತಡ್ಕ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಬೈ0ಕಿ ಭಂಡಾರಿ ಪುತ್ರಕಳ ಉಪಸ್ಥಿತರಿದ್ದರು. ಹರ್ಷ ರೈ ಪುತ್ರಕಳ ಸ್ವಾಗತಿಸಿ, ದೇವಾನಂದ ಮಾಸ್ತರ್ ವಂದಿಸಿದರು.ಜಯ ಮಣಿಯಂಪಾರೆ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅನ್ನ ಸಂತರ್ಪಣೆ ಜರಗಿತು.