HEALTH TIPS

ಟೆಂಡರ್ ಕೋರಿಕೆ


      ಕಾಸರಗೋಡು: ನೀಲೇಶ್ವರ ಮೀನುಗಾರಿಕೆ ಕೇಂದ್ರದ ಆಡ್ಮಿನಿಸ್ಟ್ರೇಟಿವ್ ಬ್ಲಾಕ್ ಲೀಸ್ ಗೆ ವಹಿಸಿಕೊಂಡು ನಡೆಸುವ ನಿಟ್ಟಿನಲ್ಲಿ ಟೆಂಡರ್ ಕೋರಲಾಗಿದೆ. ಸಹಾಯಕ ಅಭಿಯಂತರರು, ಚೆರುವತ್ತೂರು ಸಬ್ ಡಿವಿಝನ್, ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಟೆಂಡರ್ ಅಪೇಕ್ಷಿಸಿದೆ. ಈ ವರ್ಷದ ಅವಧಿಗೆ ಟೆಂಡರ್ ಕೋರಲಾಗಿದೆ. ಟೆಂಡರ್ ಗಳು ಇ.ಎಂ.ಡಿ. ಸಹಿತ ಸೀಲ್ ಮಾಡಿರುವ ಕವರ್ ನಲ್ಲಿ ರಿಜಿಸ್ಟರ್ಡ್ /ಸ್ಪೀಡ್ ಪೋಸ್ಟ್ ಮೂಲಕ 2019 ಜೂನ್ 13ರ ಮಧ್ಯಾಹ್ನ ಒಂದು ಗಂಟೆಗೆ ಮುಂಚಿತವಾಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಅಭಿಯಂತರರು, ಹಾರ್ಬರ್ ಅಭಿಯಂತರರ ಉಪ ವಿಭಾಗ, ಚೆರುವತ್ತೂರು ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಕವರ್ ನ ಮೇಲ್ಭಾಗದಲ್ಲಿ "ನೀಲೇಶ್ವರ ಮೀನುಗಾರಿಕೆ ಕೇಂದ್ರದ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ಲೀಸ್ ಗೆ ವಹಿಸುವ ಸಂಬಂಧ ದರ್ಘಾಸ್ " ಎಂದು ಬರೆದು, ಹೆಸರು, ವಿಳಾಸ ನಮೂದಿಸಬೇಕು. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಬಹಿರಂಗ ಹರಾಜು ಕೂಡ ನಡೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 0467-2264143 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries