ಬ್ಯಾಂಕಾಕ್: ಮಹಾ ವಾಜಿರಲಾಂಗ್ ಕಾರ್ನ್ ಥಾಯ್ಲೆಂಡ್ ದೊರೆಯಾಗಿ ಇದೇ ಶನಿವಾರ ಪಟ್ಟಾಭಿಷೇಕಿತರಾಗುತ್ತಿದ್ದು ಇದಕ್ಕೂ ಮೊದಲು ಭದ್ರತಾ ಪಡೆಯ ಮುಖ್ಯಸ್ಥೆಯನ್ನು ವಿವಾಹವಾಗಿ ಆಕೆಯನ್ನು ಮನೆತನ ರಾಣಿಯಾಗಿ ಘೋಷಿಸಿದ್ದಾರೆ.
2016ರ ಅಕ್ಟೋಬರ್ ನಲ್ಲಿ ಥಾಯ್ಲೆಂಡ್ ರಾಜ ಭೂಮಿಬೋಲ್ ಅದುಲ್ಯದೇಜ್ ನಿಧನರಾಗಿದ್ದು ಮೂರು ವರ್ಷಗಳ ಬಳಿಕ ಕಳೆದ ಶನಿವಾರ ಭೂಮಿಬೋಲ್ ಅವರ ಪುತ್ರ ಮಹಾ ವಾಜಿರಲಾಂಗ್ ಕಾರ್ನ್ ಅವರು ಥಾಯ್ಲೆಂಡ್ ಮಹಾರಾಜನಾಗಿ ಪಟ್ಟಾಭಿಷೇಕಿತರಾಗಲಿದ್ದಾರೆ.
66 ವರ್ಷದ ರಾಜ ಮಹಾ ವಾಜಿರಲಾಂಗ್ ಕಾರ್ನ್ ಅವರು 40 ವರ್ಷದ ಸುತಿದಾ ಅವರನ್ನು ವಿವಾಹವಾಗಿದ್ದು ಇದೀಗ ಅವರನ್ನು ಮಹಾರಾಣಿಯಾಗಿ ಘೋಷಿಸಿದ್ದಾರೆ.
ಥಾಯ್ ಏರ್ ವೇಸ್ ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುತಿದಾ ಅವರು 2013ರಲ್ಲಿ ರಾಜನ ಭದ್ರತಾ ಪಡೆಯಲ್ಲಿ ಕಮಾಂಡೋ ಆಗಿ ಸೇರಿಕೊಂಡಿದ್ದರು.
ರಾಜ ಮಹಾ ವಾಜಿರಲಾಂಗ್ ಅವರು ಇದಕ್ಕೂ ಮೊದಲು ಮೂರು ಮದುವೆಯಾಗಿದ್ದು ಇದು ನಾಲ್ಕನೇ ಮದುವೆ. 2014ರಲ್ಲಿ ಅವರು ಮೂರನೇ ಹೆಂಡತಿಗೆ ವಿಚ್ಛೇದನ ನೀಡಿದ್ದರು.