ಕುಂಬಳೆ: ಕಂಚಿಕಟ್ಟೆ ಶ್ರೀವಾಸುಕಿ ನಾಗಬ್ರಹ್ಮ ಸಪರಿವಾರ ದೈವಕ್ಷೇತ್ರದ ಶ್ರೀನಾಗದೇವರು ಮತ್ತು ಸಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮೇ.12 ರಂದು ಬ್ರಹ್ಮಶ್ರೀ ಕಾರಿಂಜ ಬಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮೇ.12 ರಂದು ಬೆಳಿಗ್ಗೆ 9ಕ್ಕೆ ಪ್ರಾರ್ಥನೆ, 9.30 ರಿಂದ ಸ್ವಸ್ತಿ ಪುಣ್ಯಾಹ ವಾಚನ, ನಾಗದೇವರಿಗೆ ಮತ್ತು ಪರಿವಾರ ದೈವಗಳಿಗೆ ನವಕ ಪ್ರದಾನ, ಗಣಯಾಗ, 11 ರಿಂದ ನಾಗ ದೇವರಿಗೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, 11.30 ರಿಂದ ಸರ್ವ ಪ್ರಾಯಶ್ಚಿತ ಆಶ್ಲೇಷಾಬಲಿ, ಮಧ್ಯಾಹ್ನ 12ಕ್ಕೆ ಪ್ರಸನ್ನಪೂಜೆ, ಪ್ರಸಾದ ವಿತರಣೆ, 1 ರಿಂದ ಅನ್ನಸಂತರ್ಪಣೆ, ಸಂಜೆ 7 ರಿಂದ ಗುಳಿಗ ದೈವಕ್ಕೆ ಬಲಿ ನೀಡುವುದು ಮೊದಲಾದ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.