ಕಾಸರಗೋಡು: ಕಳೆದ 1975ರಲ್ಲಿ ದೇಶದಾದ್ಯಂತ ಅಂದಿನ ಪ್ರದಾನಿ ಇಂದಿರಾಗಾಂಧಿಯವರು ಘೋಶಿಸಿದ ತುರ್ತುಪರಿಸ್ಥಿತಿಯ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಲೋಕಸಂಘರ್ಷ ಸಮಿತಿ ಸಂಘಟನೆಯ ಮೂಲಕ ಹೋರಾಟ ನಡೆಸಿ ಮಡಿದವರ, ಹಲ್ಲೆಗೊಳಗಾಗಿ ಅಶಕ್ತರಾಗಿ ಹಾಸಿಗೆ ಹಿಡಿದಿರುವ,ಮತ್ತು ಭೂಗತರಾಗಿ ಕಾರ್ಯಾಚರಿಸಿದವರಿಗೆ ಮತ್ತು ಸೊತ್ತುಗಳನ್ನು ಕಳಕೊಂಡ ಸಂಘಪರಿವಾರದ ಎಲ್ಲರಿಗೂ ರಾಜ್ಯ ಸರಕಾರ ಚಿಕಿತ್ಸಾ ನೆರವು,ಸಹಾಹ ಧನ ಮತ್ತು ಪಿಂಚಣಿ ನೀಡಬೇಕೆಂಬುದಾಗಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಸಮಿತಿಯ ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ವಿ.ರವೀಂದ್ರನ್ ಸರಕಾರವನ್ನು ಒತ್ತಾಯಿಸಿದರು.
ಕಾಸರಗೋಡಿನ ಟೌನ್ ಬ್ಯಾಂಕ್ ಸಭಾಹಾಲ್‍ನಲ್ಲಿ ಭಾನುವಾರ ನಡೆದ ಸಂಘಟನೆಯ ಸಭೆಯಲ್ಲಿ ಮಾತನಾಡಿದ ಅವರು ತುರ್ತುಪರಿಸ್ಥಿತಿ ವಿರುದ್ಧ ಹೋರಾಟವನ್ನು ದ್ವಿತೀಯ ಸ್ವಾತಂತ್ರ್ಯ ಹೋರಾಟವಾಗಿ ಪರಿಗಣಿಸಬೆಕು. ಹೋರಾಟಗಾರರಿಗೆ ಕೇಂದ್ರ, ರಾಜ್ಯಸರಕಾರಗಳು ಮಾನ್ಯತೆ ನೀಡಬೇಕು.ಹೋರಾಟದಲ್ಲಿ ಮಡಿದವರ ಮನೆಯವರಿಗೆ ಸರಕಾರದ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂಬುದಾಗಿಯೂ ಸಭೆಯಲ್ಲಿ ಒತ್ತಾಯಿಸಲಾಯಿತು.ಈ ಕುರಿತು ರಾಜ್ಯ ಸರಕಾರದ ಅಡಿಶನಲ್ ಚೀಫ್ ಸೆಕ್ರೆಟರಿಯವರು ಕಳೆದ ಫೆ.18 ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಸುತ್ತೋಲೆ ಹೊರಡಿಸಿರುವರು.ಇದರಂತೆ ಆಯಾ ಗ್ರಾಮ ಕಚೇರಿ ಗ್ರಾಮಾಧಿಕಾರಿಗಳಿಂದ ಜಿಲ್ಲಾಡಳಿತ ವರದಿ ಕೇಳಿದ್ದರೂ ಹೆಚ್ಚಿನ ಗ್ರಾಮಾಧಿಕಾರಿಗಳು ಲೋಕಸಭಾ ಚುನಾವಣೆಯ ನೆಪ ಒಡ್ಡಿ ಸಕಾಲದಲ್ಲಿ ವರದಿ ಸಲ್ಲಿಸದೆ ಕರ್ತವ್ಯದಲ್ಲಿ ವಿಮುಖತೆ ತೋರಿರುವುದಾಗಿಯೂ ಇನ್ನೂ ಕೆಲವು ಆಡಳಿತ ಪಕ್ಷದ ಅಧಿಕಾರಿಗಳು ಇದನ್ನು ನಿರ್ಲಕ್ಷಗೊಳಿಸಿರುವುದಾಗಿ ಸಭೆಯಲ್ಲಿ ಆರೋಪಿಸಲಾಯಿತು. ದೇಶದಾದ್ಯಂತ ಕೇಂದ್ರ ಸರಕಾರದ ಆದೇಶದಂತೆ ಬಿ.ಜೆ.ಪಿ.ಆಡಳಿತ ನಡೆಸುವ ಎಲ್ಲಾ ಸರಕಾರಗಳು ತುರ್ತುಪರಿಸ್ಥಿತಿ ಸಂತ್ರಸ್ಥರಿಗೆ ನೆರವು ಮತ್ತು ಪಿಂಚಣಿ ನೀಡುತ್ತಿದ್ದರೂ ರಾಜ್ಯ ಸರಕಾರ ಬಹಳಷ್ಟು ವಿಳಂಬವಾಗಿ ಇದಕ್ಕೆ ಮುಂದಾಗಿದೆ.ಅದರಲ್ಲೂ ತುರ್ತುಪರಿಸ್ಥಿತಿ ಕಾಲದಲ್ಲಿ ಯಾವುದೇ ಪ್ರತಿಭಟನೆ ನಡೆಸದೆ ಅವಿತಿದ್ದ ಸಿ.ಪಿ.ಎಂ.ಪಕ್ಷ ಇಂದು ಆಡಳಿತದ ನೆಪದಲ್ಲಿ ಪಕ್ಷದ ಕಾರ್ಯಕರ್ತರರನ್ನು ಹೋರಾಟಗಾರರೆಂಬುದಾಗಿ ಬಿಂಬಿಸಿ ನೆರವಿಗೆ ಮುಂದಾಗಿದೆ ಎಂಬುದಾಗಿ ಸಭೆಯಲ್ಲಿ ಆರೋಪಿಸಲಾಯಿತು.
ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಮಿಸ ಕಾಯಿದೆಯಡಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದ ನ್ಯಾಯವಾದಿ ಕೆ.ಸುಂದರ ರಾವ್ ಸಭೆಯ ಅಧ್ಯಕ್ಷತೆ ವಹಿಸಿದರು.ಸಂಘಟನೆಯ ರಾಜ್ಯ ಸಮಿತಿ ಸದಸ್ಯ ತಂಬಾನ್ ಪಿ ಮತ್ತು ಜಿಲ್ಲಾ ಸಮಿತಿ ಪದಾ„ಕಾರಿಗಳು,ಸದಸ್ಯರು ಹೋರಾಟಗಾರರು ಮತ್ತು ಭೂಗತರಾಗಿ ಕಾರ್ಯಾಚರಿಸಿದ ಕಾರ್ಯಕರ್ತರು ಭಾಗವಹಿಸಿದರು.
ತುರ್ತುಪರಿಸ್ಥಿತಿ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚಿನ ತಂಡಗಳು ಹೋರಾಟ ನಡೆಸಿ ಸಹಸ್ರಾರು ಕಾರ್ಯಕರ್ತರು ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿರುವರು.ಹಲವು ಹೋರಾಟಗಾರರಿಗೆ ಪೆÇಲೀಸ್ ಠಾಣೆಯಲ್ಲಿ ಹಿಂಸೆ ನೀಡಿ ರಾತ್ರಿಕಾಲದಲ್ಲಿ ದೂರದ ಕಾಡಿನ ನಿರ್ಜನ ಪ್ರದೇಶದಲ್ಲಿ ಬಿಡಲಾಗಿದೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಹಲವಾರು ಸಂಘಪರಿವಾರದ ಮನೆಗಳಿಗೆ ಅಂಗಡಿಗಲಿಗೆ ಪೆÇಲೀಸರ ತಂಡ ಧಾಳಿ ನಡೆಸಿರುವುದಲ್ಲದೆ ಕಂಗು ಬಾಳೆ ಕೃಷಿಗಳನ್ನು ಮತ್ತು ಕೃಷಿಯಂತ್ರಗಳಿಗೆ ಹಾನಿ ಎಸಗಿದೆ.ಆದರೆ ಸಂತ್ರಸ್ತರಿಗೆ ಈ ತನಕ ಯಾವುದೇ ಪರಿಹಾರ ದೊರೆಯದೆ ಅನ್ಯಾಯವಾಗಿದೆ.ಆದುದರಿಂದ ಇವರಿಗೆ ತಕ್ಷಣ ಸರಕಾರ ನೆರವು ಮತ್ತು ಪಿಂಚಣಿ ನೀಡಬೇಕೆಂಬುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.ತುರ್ತುಪರಿಸ್ಥಿತಿ ಸಂತ್ರಸ್ತರು ಆಯಾ ಗ್ರಾಮ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕೆಂಬುದಾಗಿ ಸೂಚಿಸಲಾಯಿತು.ಸಂಘಟನೆಯ ಕೋಶಾಧಿಕಾರಿ ಎಂ.ಮಹಾಬಲ ರೈ ಸ್ವಾಗತಿಸಿ, ಕಾರ್ಯದರ್ಶಿ ಅಚ್ಯುತ ಚೇವಾರ್ ವಂದಿಸಿದರು.