HEALTH TIPS

ಭಕ್ತಿಯ ಶಕ್ತಿಯನ್ನು ಪ್ರಚುರಪಡಿಸುವ ಶಕ್ತಿ ಸಾಹಿತ್ಯಕ್ಕಿದೆ-ಎಡನೀರು ಶ್ರೀ - ಕಾವ್ಯ ಸೌರಭ ಸಂಕಲನ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶ


      ಬದಿಯಡ್ಕ: ವ್ಯಕ್ತಿತ್ವ ವಿಕಸನದೊಮದಿಗೆ ಸಾಮಾಜಿಕ, ಧಾರ್ಮಿಕ, ವೈಚಾರಿಕ ಬೆಳವಣಿಗೆಗಳಿಗೆ ಉತ್ತಮ ಸಾಹಿತ್ಯ ಕೃತಿಗಳು ಬೆಂಬಲ ನೀಡುತ್ತದೆ. ನಶಿಸುತ್ತಿರುವ ಪರಂಪರೆ, ನಂಬಿಕೆಗಳನ್ನು ಸುದೃಢಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳು ಮೂಡಿಬರಬೇಕು. ಭಕ್ತಿಯ ಶಕ್ತಿಯನ್ನು ಪ್ರಚುರಪಡಿಸುವ ಕೆಲಸ ಸಾಹಿತ್ಯ ಕೃತಿಗಳಿಂದ ಸಾಧ್ಯ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ತಿಳಿಸಿದರು.
   ಎಡನೀರು ಶ್ರೀಮಠದಲ್ಲಿ 2018ರಲ್ಲಿ ನಡೆದ ನಡೆದ ಶ್ರೀಗಳ 58ನೇ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭ ಏರ್ಪಡಿಸಲಾಗಿದ್ದ ಕವಿಗೋಷ್ಠಿಯ ವಾಚಿಸಲ್ಪಟ್ಟ ಕವನಗಳನ್ನು ಒಗ್ಗೂಡಿಸಿ ಪ್ರಕಟಿಸಲಾದ ಸ್ಮøತಿ ಸಂಪದದ ಅನುಬಂಧ ರೂಪದಲ್ಲಿ ಹೊರತರಲಾದ ಕಾವ್ಯ ಸೌರಭ ಕವನ ಸಂಗ್ರಹ ಹೊತ್ತಗೆಯನ್ನು ಶ್ರೀಮಠದ ಸಭಾಂಗಣದಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಶ್ರೀಗಳು ಅನುಗ್ರಹ ಆಶೀರ್ವಚನ ನೀಡಿದರು.
   ಚಾತುರ್ಮಾಸ್ಯ ವ್ರತಾನುಷ್ಠಾನದ ಧಾರ್ಮಿಕ ವ್ಯವಸ್ಥೆಯಲ್ಲಿ ಸಾಹಿತ್ಯ ವೇದಿಕೆಯೊಂದು ಒದಗಿಬಂದದ್ದು ಅತ್ಯಂತ ಅರ್ಥಪೂರ್ಣವಾದುದು. ಜೊತೆಗೆ ಕವಿಗೋಷ್ಠಿಯ ಕವನಗಳ ಆಗ್ರಹವೂ ಒಂದು ದಾಖಲೆಯಾಗಿದೆ ಎಂದು ಶ್ರೀಗಳು ಈ ಸಂದರ್ಭ ತಿಳಿಸಿದರು.
    ಕೃತಿಯ ಸಂಪಾದಕ, ಸಾಹಿತಿ, ಕಲಾವಿದ ಡಾ.ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ಉಪಸ್ಥಿತರಿದ್ದರು. ವೆಂಕಟ್ ಭಟ್ ಎಡನೀರು ವಂದಿಸಿದರು.
    ಚಾತುರ್ಮಾಸ್ಯ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಡಾ.ವಸಂತಕುಮಾರ್ ಪೆರ್ಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಎಸ್.ವಿ.ಭಟ್, ಡಾ.ರತ್ನಾಕರ ಮಲ್ಲಮೂಲೆ, ಟಿ.ಎನ್.ಎ.ಖಂಡಿಗೆ, ವಿರಾಜ್ ಅಡೂರು, ವಿಜಯಲಕ್ಷ್ಮೀ ಶ್ಯಾನುಭೋಗ್, ಸತ್ಯವತಿ ಎಸ್.ಭಟ್ ಕೊಳಚ್ಚಪ್ಪು, ಡಾ.ನರೇಶ್ ಮುಳ್ಳೇರಿಯ, ಪುರುಷೋತ್ತಮ ಭಟ್ ಕೆ, ಹ.ಸು.ಒಡ್ಡಂಬೆಟ್ಟು, ಡಾ.ರಾಧಾಕೃಷ್ಣ ಬೆಳ್ಳೂರು, ವೆಂಕಟ್ ಭಟ್ ಎಡನೀರು ಕವಿತೆಗಳನ್ನು ವಾಚಿಸಿದ್ದು, ಅವರ ಕವಿತೆಗಳು ಹೊತ್ತಗೆಯಲ್ಲಿ ಒಳಗೊಂಡಿದೆ. 
   ಬಳಿಕ ಮಾಸ್ತರ್ ವಿಷ್ಣು ಭಟ್ ರಚಿಸಿದ್ದ ಪಾಂಚಜನ್ಯ ಯಕ್ಷಗಾನ ಪ್ರಸಂಗದ ಪ್ರದರ್ಶನ ಶ್ರೀಎಡನೀರು ಮೇಳದವರಿಂದ ಪ್ರಸ್ತುತಿಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries