ಕಾಸರಗೋಡು: ಅಣಂಗೂರು ಕೊಲ್ಲಂಪಾಡಿ ತುರ್ತಿ ರಸ್ತೆಯ ಪರಿವಾರ ಬಂಟ ಸಮುದಾಯದ ಕೊಲ್ಲಂಪಾಡಿ ಪರಿವಾರ ಬಂಟ ತರವಾಡು ಸೇವಾ ಸಮಿತಿಯ ಆಶ್ರಯದಲ್ಲಿ ಧರ್ಮದೈವಗಳ ನೇಮೋತ್ಸವ ಹಾಗು ಪ್ರತಿಷ್ಠಾಪನಾ ದಿನಾಚರಣೆ ಮೇ 11, 12 ಮತ್ತು 26 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 11 ರಂದು ಬೆಳಿಗ್ಗೆ 8.30 ಕ್ಕೆ ಶ್ರೀ ಗಣಪತಿ ಹೋಮ, 9.30 ಕ್ಕೆ ಶ್ರೀ ಧೂಮಾವತಿ ಹಾಗು ಪರಿವಾರ ದೈವಗಳಿಗೆ ತಂಬಿಲ, ಸಂಜೆ 6 ಕ್ಕೆ ಶ್ರೀ ಧೂಮಾವತಿ ದೈವ ಮತ್ತು ಪರಿವಾರ ದೈವಗಳ ಭಂಡಾರ ಇಳಿಯುವುದು, ನಂತರ ಶ್ರೀ ಧೂಮಾವತಿ ದೈವದ ತೊಡಂಙಲ್ ಹಾಗು ಸಹದೈವಗಳ ಕೋಲ, ರಾತ್ರಿ 8 ಕ್ಕೆ ಅನ್ನಸಂತರ್ಪಣೆ, 9 ರಿಂದ ಪಂಜುರ್ಲಿ ಹಾಗು ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯುವುದು.
ಮೇ 12 ರಂದು ಬೆಳಿಗ್ಗೆ 5 ಕ್ಕೆ ಕೊರತಿ ದೈವದ ಕೋಲ, 10 ಕ್ಕೆ ಶ್ರೀ ಧೂಮಾವತಿ ದೈವದ ಧರ್ಮನೇಮ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ಜರಗಲಿದೆ.
ಮೇ 26 ರಂದು ಪ್ರತಿಷ್ಠಾ ದಿನದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ಶ್ರೀ ಗಣಪತಿ ಹೋಮ, 9.30 ಕ್ಕೆ ಶ್ರೀ ಧೂಮಾವತಿ ಹಾಗು ಪರಿವಾರ ದೈವಗಳಿಗೆ ತಂಬಿಲ, 10.30 ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 7 ಕ್ಕೆ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ಕಾಲಾವಧಿ ತಂಬಿಲ ನಡೆಯಲಿದೆ.