ಕುಂಬಳೆ: ಸಾಹಿತ್ಯ, ಸಾಂಸ್ಕ್ರತಿಕ ಚಟುವಟಿಕೆಗಳ ಮೂಲಕ ಸ್ನೇಹದ ಸಮಾಜ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಕವಿ, ಚಲನಚಿತ್ರ ಸಂಗೀತ ನಿರ್ದೇಶಕ ಎರತ್ತೋಳಿ ಮೂಸಾ ಅವರ ಬದುಕು ಹೊಸ ತಲೆಮಾರಿ ಆದರ್ಶವಾದುದು ಎಂದು ಮುಸ್ಲಿಂಲೀಗ್ ಜಿಲ್ಲಾ ಕೋಶಾದಿಕಾರಿ ಕಲ್ಲಟ್ರ ಮಾಹಿನ್ ಹಾಜಿ ಅವರು ತಿಳಿಸಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಕವಿ, ಚಲನಚಿತ್ರ ಸಂಗೀತ ನಿರ್ದೇಶಕ ಎರತ್ತೋಳಿ ಮೂಸಾ ಅವರಿಗೆ ದುಬೈ ಮಲಬಾರ್ ಕಲಾ ಸಾಹಿತ್ಯ ವೇದಿಕೆಯು ಕುಂಬಳೆ ಪ್ರೆಸ್ ಪೋರಂ ನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರುತ್ತೋಳಿ ಮೂಸಾ ಅವರ ಸರಳ ಸಜ್ಜನಿಕೆ ಮಾದರಿಯಾದುದು. ಎಲ್ಲರೊಂದಿಗೂ ಸ್ನೇಹದ ಕಡಲಾಗಿದ್ದ ಅವರು ಕುಂಬಳೆ, ಮೊಗ್ರಾಲ್ ಪರಿಸರದಲ್ಲಿ ವಾಸಿಸುತ್ತ ನೂರಾರು ಸ್ನೇಹಿತರನ್ನು, ಸಮಾನ ಮನಸ್ಕರನ್ನು ಒಟ್ಟುಸೇರಿಸಿ ಮಾಪಿಳ್ಳಪ್ಪಾಟ್ ನ ಪ್ರಚಾರಕ್ಕೆ ನೀಡಿದ ಕೊಡುಗೆ ಒಮದು ದಾಖಲೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಖ್ಯಾತ ಮಾಪಿಳ್ಳೆಪ್ಪಾಟ್ ಗಾಯಕ, ಕವಿ, ಶುಕೂರ್ ಉಡುಂಬುಂತಲ ಅವರು ಸಂಸ್ಮರಣಾ ಭಾಷಣ ಮಾಡಿದರು. ಮಾಪಿಳ್ಳೆಪ್ಪಾಟ್ ಗಾಯಕರಾದ ಇಸ್ಮಾಯಿಲ್ ತಳಂಗರೆ, ನವಾಝ್ ಕಾಸರಗೋಡು, ವಿವಿಧ ವಲಯಗಳ ಪ್ರಮುಖರಾದ ಲಕ್ಷ್ಮಣ ಪ್ರಭು ಕುಂಬಳೆ,
ಅನ್ವರ್ ಸದಾತ್ ಕೋಳಿಯಡ್ಕ, ಸತ್ತಾರ್ ಆರಿಕ್ಕಾಡಿ, ಬಿ.ಎಲ್.ಮೊಹಮ್ಮದಾಲಿ, ಪ್ರೆಸ್ಸ್ ಕಲ್ಬ್ ಅಧ್ಯಕ್ಷ ಸುರೇಂದ್ರನ್ ಚೀಮೇನಿ, ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಲತೀಫ್ ಕುಂಬಳೆ, ಲತೀಫ್ ಮಾಸ್ತರ್, ಸತ್ತಾರ್ ಮಾಸ್ತರ್, ಸಿದ್ದೀಕ್ ದಂಡೆಗೋಳಿ ಉಪಸ್ಥಿತರಿದ್ದು ಮಾತನಾಡಿದರು. ದುಬೈ ಮಲಬಾರ್ ಕಲಾ ಸಾಂಸ್ಕøತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಾರ್ಳೆ ಸ್ವಾಗತಿಸಿ, ಶರೀಫ್ ಕೋಟ ವಂದಿಸಿದರು.