ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರೂಪೀಕರಣ ಇತ್ತೀಚೆಗೆ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸೇವಾ ಸಮಿತಿಯ ಅಧ್ಯಕ್ಷ ಗಂಗಾಧರ ನಾಯ್ಕ ಓಣಿಯಡ್ಕ ಮತ್ತು ಶ್ರೀ ಮಂದಿರದ ರಮೇಶ ಗುರುಸ್ವಾಮಿ ಉಪಸ್ಥಿತರಿದ್ದರು. ರವಿಚಂದ್ರ ಮೈಕುರಿ ಗತವರ್ಷದ ಲೆಕ್ಕ ಪತ್ರವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ನೂತನ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಜಯದೇವ ಖಂಡಿಗೆ, ಅಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ ನೀರ್ಚಾಲು ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವಪ್ಪ ನಾಯ್ಕ ಓಣಿಯಡ್ಕ, ಚೋಮ ನಾಯ್ಕ ಮೈಕುರಿ, ರವಿಂದ್ರ ಮಾಸ್ತರ್ ನೀರ್ಚಾಲು, ಕಾರ್ಯದರ್ಶಿಯಾಗಿ ಸೀತಾರಾಮ ಆಚಾರ್ಯ ವಿ.ಯಮ್ ನಗರ ಬೇಳ, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯ್ಕ ದೊಡ್ಡಮೂಲೆ, ದಿವಾಕರ ನೀರ್ಚಾಲು, ಮಹೇಶ ಓಣಿಯಡ್ಕ, ಕೋಶಾಧಿಕಾರಿಯಾಗಿ ಸುರೇಶ ನಾಯ್ಕ ನೀರ್ಚಾಲು, ಲೆಕ್ಕ ಪರಿಶೋಧಕರಾಗಿ ಕುಮಾರ್ ಎಮ್, ಸಂಚಾಲಕರಾಗಿ ಗಂಗಾಧರ ನಾಯ್ಕ ಒಣಿಯಡ್ಕ ಹಾಗೂ 15 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಸೀತಾರಾಮ ಆಚಾರ್ಯ ವಂದಿಸಿದರು. ಸುಧಾಮ ಮಾಸ್ತರ್ ಮಲ್ಲಡ್ಕ ನೀರ್ಚಾಲು ಕಾರ್ಯಕ್ರಮವನ್ನು ನಿರೂಪಿಸಿದರು.