HEALTH TIPS

ರಂಗಸಿರಿಯಂತಹ ಸಂಘಟನೆಗಳಿಂದ ಕಲೆಯು ಶ್ರೀಮಂತ : ನ್ಯಾಯವಾದಿ ದಾಮೋದರ ಶೆಟ್ಟಿ

Top Post Ad

Click to join Samarasasudhi Official Whatsapp Group

Qries

Qries

         ಬದಿಯಡ್ಕ: ಗ್ರಾಮೀಣ ಪ್ರದೇಶಗಳಲ್ಲಿ ಕಲಾವಿದರಿಗೆ ವೇದಿಕೆ, ಕಲಾಪ್ರಾಕಾರಗಳಿಗೆ ಪ್ರೋತ್ಸಾಹವನ್ನು ನೀಡುವಲ್ಲಿ ರಂಗಸಿರಿಯಂತಹ ಸಂಘಟನೆಗಳು ಪ್ರಧಾನ ಪಾತ್ರವಹಿಸುವುದಲ್ಲದೆ ಕಲೆಯನ್ನು ಶ್ರೀಮಂತವಾಗಿಸುತ್ತದೆ. ಕಲೆಯ ಸಂಸರ್ಗದಿಂದ ವರ್ಚಸ್ಸು, ವಚನ, ವರ್ತನೆ ಸುಕೃತಗೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಅಭಿಪ್ರಾಯಪಟ್ಟರು.
         ಶನಿವಾರ ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ ಸಭಾಭವನದಲ್ಲಿ ನಡೆದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ `ರಂಗಸಿರಿ ಸಂಭ್ರಮ 2019'ರ ಸಭಾಕಾರ್ಯಕ್ರಮದಲ್ಲಿ ಪ್ರಖ್ಯಾತ ಸಂಗೀತ ಶಿಕ್ಷಕಿ ವಿದುಷಿ ಸಾವಿತ್ರಿ ಕೆ.ದೊಡ್ಡಮಾಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
       ಕಲೆಯು ಬದುಕಿನ ಒಂದು ಅಂಗವಾಗಿದೆ. ಕಲಾಜೀವಿಯಾದವನು ಎಲ್ಲ ಪ್ರಾಕಾರಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸೃಜನಶೀಲ ಕಲಾವಿದನಾಗಿ ಹೊರಹೊಮ್ಮುತ್ತಾನೆ. ಕಲಾರಸಿಕರಿಗೆ ಮುದವನ್ನು ನೀಡುವ ಮೂಲಕ ಸಾಧಕ ಕಲಾವಿದನು ಸಾರ್ಥಕತೆಯನ್ನು ಹೊಂದುತ್ತಾನೆ ಎಂದರು.
        ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಕಾಸರಗೋಡಿನ ಮಣ್ಣಿನಲ್ಲಿ ಕಲೆಯ ಉಳಿವಿಗೆ ಕಲಾಪೋಷಕರು ಪ್ರಧಾನ ಕಾರಣರಾಗಿದ್ದಾರೆ. ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುವ ಕಾಯಕಕ್ಕೆ ಮೊದಲ ಆದ್ಯತೆಯನ್ನು ನೀಡಿ ಸಂಸ್ಥೆಯು ಮುನ್ನಡೆಯುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡದ ಕಲೆಗಳ ಪಾಲು ಅಪಾರ ಎಂದರು.
     ಸನ್ಮಾನವನ್ನು ಸ್ವೀಕರಿಸಿ ವಿದುಷಿ ಸಾವಿತ್ರಿ ಕೆ.ದೊಡ್ಡಮಾಣಿ ಮಾತನಾಡಿ, ಸಂಗೀತ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನೆ ಮನದಲ್ಲಿ ಭಾರತೀಯ ಸನಾತನ ಸಂಸ್ಕøತಿಯನ್ನು ಕಾಣಬಹುದು. ಆಸಕ್ತರಿಗೆ ವಿದ್ಯೆ ಲಭ್ಯವಾಗಬೇಕೆಂಬ ಉದ್ದೇಶವನ್ನಿಟ್ಟು ತರಗತಿಗಳನ್ನು ನಡೆಸುತ್ತಿದ್ದೇನೆ. ಸಂಗೀತವು ಭಾರತೀಯ ಸಂಸ್ಕøತಿಗೆ ಪೂರಕವಾದ ಕಲೆಯಾಗಿದೆ ಎಂದು ಅವರು ತಿಳಿಸಿದರು.
    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಗೈದ ಕನ್ನಡ ಕೋಗಿಲೆ ಅಪೇಕ್ಷಾ ಪೈ, ಡ್ರಾಮಾ ಜೂನಿಯರ್ ಅನೂಪ್ ರಮಣ ಶರ್ಮ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ರಂಗಸಿರಿಯ ಸಾಧಕ ವಿದ್ಯಾರ್ಥಿಗಳಾದ ವಿದ್ಯಾ ಕುಂಟಿಕಾನ ಮಠ, ಸುಪ್ರೀತಾ ಸುಧೀರ್, ಅಭಿಜ್ಞಾ ಭಟ್ ಬೊಳುಂಬು, ಕಿಶನ್ ಅಗ್ಗಿತ್ತಾಯ, ಉಪಾಸನಾ ಪಂಜರಿಕೆ, ಆಕಾಶ್, ವಿಧೇಯ ಪಿ., ವಿಶ್ವಾಸ್ ಪಿ., ಸೃಜನ್ ಕೇಶವ ಪಿ., ಅನ್ವಿತಾ ತಲ್ಪಣಾಜೆ, ಸುಮೇಧಾ ಕೆ.,ಸಮನ್ವಿತಾ ವಳಕ್ಕುಂಜ ಹಾಗೂ ಸೂರಜ್‍ರನ್ನು ಅಭಿನಂದಿಸಲಾಯಿತು. ನಾರಾಯಣ ಭಟ್ ಅಣ್ಣಡ್ಕ ಸನ್ಮಾನ ಪತ್ರವನ್ನು ವಾಚಿಸಿದರು. ರಂಗಸಿರಿಯ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಂಕರ್ ಸಾರಡ್ಕ, ಸುಶೀಲಾ ಕೆ.ಪದ್ಯಾಣ ಸಹಕರಿಸಿದರು. ಮಧ್ಯಾಹ್ನ ಸಂಗೀತ ವಿದುಷಿ ಗೀತಾ ಸಾರಡ್ಕ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಹಾಗೂ ಡಾ. ಸ್ನೇಹ ಪ್ರಕಾಶ್ ಪೆರ್ಮುಖ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭಜನ್ ಸಂಗೀತ ಮುದವನ್ನು ನೀಡಿತು. ರಾತ್ರಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯರು ನಿರ್ದೇಶನದಲ್ಲಿ ಭೌಮಾಸುರ ಮೋಕ್ಷ-ಶಿವಲೀಲೆ, ಇಂದ್ರಜಿತು ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ಸಂಸ್ಥೆಯ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಕಾರ್ಯಕ್ರಮದುದ್ದಕ್ಕೂ ಸಹಕಾರವನ್ನು ನೀಡಿದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries