ಮಧೂರು: ಮಧೂರು ಶ್ರೀಕಾಳಿಕಾಂಬ ಮಠದ ಸಭಾಂಗಣಕ್ಕೆ ಮಾಹಿತಿ ಫಲಕವನ್ನು ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ಈ ಬಗ್ಗೆ ನಡೆದ ಫಲಕ ಹಸ್ತಾಂತರ ಕಾರ್ಯದಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನ ಸಮೂಹದ ಸಂಸ್ಥಾಪಕ ಜಯ ಮಣಿಯಂಪಾರೆ, ಸಮೂಹದ ಸದಸ್ಯ, ಯುವ ಕವಿ ಮೌನೇಶ್ ಆಚಾರ್ಯ ಪುತ್ತಿಗೆ, ಮಧೂರು ಶ್ರೀಕಾಳಿಕಾಂಬ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀರ್ಚಾಲು, ಉಪಾಧ್ಯಕ್ಷರಾದ ನ್ಯಾಯವಾದಿ ಪ್ರಭಾಕರ ಆಚಾರ್ ಕೋಟೆಕ್ಕಾರು,ಜಗದೀಶ್ ಆಚಾರ್ಯ ಹಾಗೂ ಮಠದ ಯುವಕ ಸಂಘ,ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.