ಮಧೂರು: ಬಂಟರ ಸಂಘದ ಮಧೂರು ಪಂಚಾಯತಿ ಘಟಕದ ಆಶ್ರಯದಲ್ಲಿ ಮಧೂರು ಪ್ರಾದೇಶಿಕ ಸಮಿತಿ ರೂಪೀಕರಣದ ಸಭೆಯು ಕೊಲ್ಯ ಶಿವಾಜಿ ಕಲಾಮಂದಿರದಲ್ಲಿ ಇತ್ತೀಚೆಗೆ ಜರಗಿತು.
ಮಧೂರು ಪಂಚಾಯತಿ ಘಟಕದ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರುಗುತ್ತು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾಸರಗೋಡು ವಲಯ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಮಾತನಾಡಿ ಬಂಟ ಸಮುದಾಯದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಸಮಾಜ ಬಾಂಧವರು ಒಂದುಗೂಡಿ ಕಾರ್ಯವೆಸಗಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಪ್ರಾದೇಶಿಕ ಸಮಿತಿಗಳನ್ನೂ ರಚಿಸಲಾಗುತ್ತಿದೆ ಎಂದರು. ವಲಯ ಸಂಘದ ಕೋಶಾಧಿಕಾರಿ ಎಂ.ಅಶೋಕ ರೈ ಬಂಟರು ಸಂಘಟಿತರಾದರೆ ಮಾತ್ರವೇ ನಮ್ಮ ಕೇಳಿಕೆಗಳಿಗೆ ಬೆಲೆ ಬರುತ್ತದೆ ಎಂದರು.
ಮಧೂರು ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಕಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಸ್.ಎನ್.ರಾಮ ಶೆಟ್ಟಿ ಮಾಸ್ತರ್, ವಲಯ ಸಂಘದ ಉಪಾಧ್ಯಕ್ಷ ನಾರಾಯಣ ರೈ ಕುಂದಿಲ, ಕಣ್ಣೂರುಗುತ್ತು ಮಹಾಬಲ ರೈ, ಬಾಲಕೃಷ್ಣ ಮಧೂರು ಎಸ್.ಎಸ್.ರಾಮ ಶೆಟ್ಟಿ ಮಾಸ್ತರ್ ಮಾತನಾಡಿದರು.
ಬಳಿಕ ಮಧೂರು ಪ್ರಾದೇಶಿಕ ಸಮಿತಿಯನ್ನು ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ರಾಮ ಆಳ್ವ ಕೊಲ್ಯ, ಅಧ್ಯಕ್ಷರಾಗಿ ಬಾಲಕೃಷ್ಣ ಮಧೂರು, ಉಪಾಧ್ಯಕ್ಷರಾಗಿ ರಾಮ ಆಳ್ವ ಕೊಲ್ಯ, ಶೋಭಾ ಆರ್.ಆಳ್ವ ಕೊಲ್ಯ, ನ್ಯಾಯವಾದಿ ಮೋಹನ್ ಶೆಟ್ಟಿ ಮಧೂರು, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಗಳಾಗಿ ವನಜ ಶೆಟ್ಟಿ, ಅಶೋಕ್ ಆಳ್ವ ಏರಿಕ್ಕಳ, ಶುಭಾ ಶೆಟ್ಟಿ ಕೊಲ್ಯ, ಕೋಶಾಧಿಕಾರಿಯಾಗಿ ಕೃಷ್ಣ ಪ್ರಸಾದ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಶಾಂತ್ ಕೊಲ್ಯ, ರವಿ ಮಧೂರು, ಸುಜಾತ ಮಧೂರು, ವಿಠಲ ಶೆಟ್ಟಿ, ರಜನಿ ಕೊಲ್ಯ, ಸುಜಾತ ಮಧೂರು, ನಾರಾಯಣ ಶೆಟ್ಟಿ ಏರಿಕ್ಕಳ, ಸುಜಾತಚಂದ್ರ ಕೊಲ್ಯ, ಭರತ್ ರಾಜ್ ಕೊಲ್ಯ, ಶಶಿಕಲ ಮಧೂರು, ಸಂಜೀವ ಆಳ್ವ ಏರಿಕ್ಕಳ, ರಾಜೇಶ್ ಉಳಿಯತ್ತಡ್ಕ, ಸತೀಶ್ ಏರಿಕ್ಕಳ ಅವರನ್ನು ಆರಿಸಲಾಯಿತು.