HEALTH TIPS

ಯಾವುದೇ ಶೀರ್ಷಿಕೆಯಿಲ್ಲ

  ಹುಚ್ಚುಗಟ್ಟಿ ಧ್ಯಾನ ಮಾಡ್ಬೇಡಿ ಮಾರ್ರೆ- ಧ್ಯಾನ ಎಲ್ಲರಿಗೂ ಆಹ್ಲಾದಕರವಲ್ಲ: ಅಧ್ಯಯನ ವರದಿ
     ಕಾಸರಗೋಡು: ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಧ್ಯಾನ ಪರಿಹಾರ, ಅಂಥವರಿಗೆ ಧ್ಯಾನದಿಂದ ಆಹ್ಲಾದಕರ ಅನುಭವ ಸಿಗುತ್ತದೆ ಎಂಬುದನ್ನು ವ್ಯಾಪಕವಾಗಿ ನಂಬಲಾಗಿದೆ. ಆದರೆ ಈ ನಂಬಿಕೆ ಶೇ.100 ರಷ್ಟು ನಿಜವಲ್ಲ ಎನ್ನುತ್ತಿದೆ ಈ ಅಧ್ಯಯನ ವರದಿ
    ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗುವುದಿಲ್ಲ ಎನ್ನುತ್ತಿದ್ದಾರೆ ಸಂಶೋಧನೆ ನಡೆಸಿರುವ ಯುನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳು.
    ನಿಯಮಿತವಾಗಿ ಧ್ಯಾನ ಮಾಡುವವರ ಪೈಕಿ ಕಾಲುಭಾಗದಷ್ಟು ಜನರಿಗೆ ಧ್ಯಾನದಲ್ಲಿ ಭಯ ಮತ್ತು ವಿಕೃತ ಭಾವನೆಗಳ ಭಾವನೆಗಳು ಸೇರಿದಂತೆ ಮಾನಸಿಕವಾಗಿ ಅಹಿತಕರ ಅನುಭವ ಆಗಿದೆ ಎಂದು ತಿಳಿದುಬಂದಿದೆ.
     PLOS ONE  ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಮೆಡಿಟೇಷನ್ ರಿಟ್ರೀಟ್, ವಿಪಸನ, ಕೋನ್ ಅಭ್ಯಾಸ (ಝೆನ್ ಬುದ್ಧಿಸಂ ನಲ್ಲಿ ಉಪಯೋಗಿಸುವ ಯೋಗ) ಮಾಡುವವರು ಹಾಗೂ ಹೆಚ್ಚಿನ ಮಟ್ಟದಲ್ಲಿ ಪದೇ ಪದೇ ನಕಾರಾತ್ಮಕ ಯೋಚನೆಗಳನ್ನು ಹೊಂದಿರುವವರಿಗೆ ಧ್ಯಾನ ಮಾಡುವಾಗ ಅಹಿತಕರ ಅನುಭವ ಆಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
    ಕನಿಷ್ಟ 2 ತಿಂಗಳ ಕಾಲ ಧ್ಯಾನದಲ್ಲಿ ಅನುಭವ ಹೊಂದಿರುವ 1,232 ಜನರನ್ನು ಆನ್ ಲೈನ್ ಸಂಶೋಧನೆಗೆ ಒಳಪಡಿಸಲಾಗಿದ್ದಾರೆ. ಈ ಪೈಕಿ ಮಹಿಳೆಯರು ಹಾಗೂ ಧಾರ್ಮಿಕ ನಂಬಿಕೆಯುಳ್ಳವರಿಗೆ ಮಾತ್ರ ಧ್ಯಾನ ಮಾಡುವಾಗ ನಕರಾತ್ಮಕ ಅನುಭವ ಆಗಿರುವ ಉದಾಹರಣೆಗಳು ಕಡಿಮೆ ಇದೆ ಎನ್ನುವುದನ್ನೂ ಸಂಶೋಧಕರು ಕಂಡುಕೊಂಡಿದ್ದಾರೆ.
ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗದೇ ಇರುವುದಕ್ಕೆ ಕಾರಣ ಏನಿರಬಹುದೆಂಬುದನ್ನು ಕಂಡುಕೊಳ್ಳಲು ಮತ್ತಷ್ಟು ಆಳವಾದ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries