ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಕಾರಡ್ಕ, ದೇಲಂಪಾಡಿ ಪ್ರೀಮೆಟ್ರಿಕ್ ಹಾಸ್ಟೆಲ್ ಗಳಲ್ಲಿ ವಸತಿ ಹೂಡಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವ ನಿಟ್ಟಿನಲ್ಲಿ ಗೌರವಧನ ಕರಾರಿನ ಹಿನ್ನೆಲೆಯಲ್ಲಿ ನೇಮಕ ಮಾಡಲಾಗುವುದು.
ಹಾಸ್ಟೆಲ್ ಒಂದರಲ್ಲಿ ಹಿರಿಯ ಪ್ರಾಥಮಿಕ ವಿಭಾಗ ಮಟ್ಟದಲ್ಲಿ ಮೂವರು, ಪ್ರೌಢಶಾಲೆ ಮಟ್ಟದಲ್ಲಿ 6 ಮಂದಿಯನ್ನು ನೇಮಿಸಲಾಗುವುದು. ನಿರುದ್ಯೋಗಿಗಳಾದ ಪದವೀಧರರು, ಸ್ನಾತಕೋತ್ತರ ಪದವೀಧರರು, ಟಿ.ಟಿ.ಸಿ. ಅರ್ಹತೆ ಹೊಂದಿರುವವರು, ನಿವೃತ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ. ಬಿ.ಇಡಿ. ಅರ್ಹತೆ ಹೊಂದಿರುವವರು ಮತ್ತು ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.
ಪ್ರೌಢಶಾಲಾ ಮಟ್ಟದಲ್ಲಿ ಗಣಿತ, ಫಿಸಿಕಲ್ ಸಯನ್ಸ್, ನ್ಯಾಚುರಲ್ ಸಯನ್ಸ್, ಇಂಗ್ಲಿಷ್, ಹಿಂದಿ, ಸೋಷ್ಯಲ್ ಸ್ಟಡೀಸ್ ವಿಷಯಗಳಲ್ಲಿ ಟ್ಯೂಷನ್ ನೀಡಬೇಕಿದೆ. ಪ್ರೌಢಶಾಲೆ ಮಟ್ಟದ ಟ್ಯೂಷನ್ ಶಿಕ್ಷಕರಿಗೆ 4 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುವುದು. ಹಿರಿಯ ಪ್ರಾಥಮಿಕ ಮಟ್ಟದ ಟ್ಯೂಷನ್ ಶಿಕ್ಷಕರಿಗೆ 3 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುವುದು. ಬೆಳಿಗ್ಗೆ ಯಾ ಸಂಜೆ ಹೊತ್ತಲ್ಲಿ ತಿಂಗಳಿಗೆ 20 ತಾಸು ತರಗತಿ ನಡೆಸಬೇಕು. ಆಸಕ್ತರು ಅರ್ಜಿ ಮತ್ತು ಬಯೋಡಾಟಾ, ಅರ್ಹತಾಪತ್ರಗಳ ನಕಲುಗಳ ಸಹಿತ ಮೇ 23ರ ಮುಂಚಿತವಾಗಿ ಕಾರಡ್ಕ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಚಟುವಟಿಕೆ ನಡೆಸುವ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿಸಂಖ್ಯೆ: 9061069923 ಸಂಪರ್ಕಿಸಬಹುದಾಗಿದೆ.