ನ್ಯೂಯಾರ್ಕ್: 2016ರಲ್ಲಿ ತೆರೆ ಕಂಡ ಲಯನ್ ಚಿತ್ರದಲ್ಲಿ ಸರೂ ಬ್ರಿಯರ್ಲಿ ಎಂಬ ಪಾತ್ರದ ಭಾರಿ ಸದ್ದು ಮಾಡಿದ್ದ ಮುಂಬೈ ಸ್ಲಮ್ ಬಾಲಕ ಸನ್ನಿ ಪವಾರ್ ಈಗ ಮತ್ತೆ 19ನೇ ನ್ಯೂಯಾರ್ಕ್ ಭಾರತ ಚಲನ ಚಿತ್ರೋತ್ಸವದಲ್ಲಿ ಮಿಂಚಿದ್ದಾನೆ.
ನ್ಯೂಯಾರ್ಕ್ ಚಲನ ಚಿತ್ರೋತ್ಸವದಲ್ಲಿ 11 ವರ್ಷದ ಸನ್ನಿ ಪವಾರ್ 'ಚಿಪ್ಪ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಇದಕ್ಕೆಲ್ಲ ನನ್ನ ತಂದೆ-ತಾಯಿ ಕಾರಣ. ನಾನು ರಜನಿಕಾಂತ್ ತರ ಒಬ್ಬ ದೊಡ್ಡ ನಟನಾಗಬೇಕು. ಹಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಅಭಿನಯಿಸುವ ಆಸಕ್ತಿ ಇದೆ ಎಂದು ಪವಾರ್ ಹೇಳಿದ್ದಾರೆ.
ಮುಂಬೈನ ಕಲಿನ ಸ್ಲಮ್ ಪ್ರದೇಶದ ಕುಂಚಿ ಕುರ್ವೆ ನಗರದ ನಿವಾಸಿಯಾಗಿರುವ ಸನ್ನಿ ಪವಾರ್ 2016ರಲ್ಲಿ ಆಸ್ಟ್ರೇಲಿಯಾದ ಗರ್ತ್ ಡೇವಿಸ್ ನಿರ್ದೇಶನದ ಲಯನ್ ಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸಿದ್ದರು.