HEALTH TIPS

ಸಾಹಿತ್ಯವು ಜೀವನದ ನಿರಂತರ ಪ್ರಕ್ರಿಯೆ-ವಿ.ಬಿ.ಕುಳಮರ್ವ

 
     ಕಾಸರಗೋಡು: ಸಾಹಿತ್ಯದಿಂದ ಮಾನವನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮಾನವನ ಮನಸ್ಸನ್ನು ಸೋಸಿ, ಶುದ್ಧಿಕರಿಸಲು ಸಾಹಿತ್ಯದ ಸಹಕಾರ ಬೇಕು. ಸಾಹಿತ್ಯದಿಂದ ಸಾತ್ವಿಕ ಮನೋಭಾವ ಮೂಡುತ್ತದೆ. ಆದ್ದರಿಂದ ಎಳವೆಯಲ್ಲೇ ಮಕ್ಕಳಿಗೆ ಸಾಹಿತ್ಯದ ದೀಕ್ಷೆಯನ್ನು ನೀಡಬೇಕು. ಸಾಹಿತ್ಯವು ಜೀವನದ ನಿರಂತರ ಪ್ರಕ್ರಿಯೆ ಎಂದು ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಹೇಳಿದರು.
      ಅವರು ಇತ್ತೀಚೆಗೆ ಉಪ್ಪಿನಂಗಡಿಯ ಶ್ರೀರಾಮ ಶಾಲೆಯಲ್ಲಿ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಏಕದಿನ ಸಾಹಿತ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
     ಶಾಲೆಯ ವ್ಯವಸ್ಥಾಪಕ ರಾಧಾ ಯು.ಜಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಮಾಹಿತಿ ನೀಡಿದ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ಮಾತನಾಡಿ, ವ್ಯಂಗ್ಯಚಿತ್ರಗಳು ಗಂಭಿರವಾದ ಸಾಮಾಜಿಕ ಅವ್ಯವಸ್ಥೆಗಳನ್ನು ಸುಲಭವಾಗಿ ಮುಂಚಿತವಾಗಿ ಗ್ರಹಿಸಿ ಅದರ ತೊಂದರೆಯನ್ನು ಹಾಸ್ಯದ ರೂಪದಲ್ಲಿ ಹೇಳುತ್ತದೆ. ಆದ್ದರಿಂದಾಗಿ ವ್ಯಂಗ್ಯಚಿತ್ರಗಳು ಜನಪ್ರಿಯವಾಗಿವೆ. ವ್ಯಂಗ್ಯಚಿತ್ರಗಾರನಿಗೆ ಚಿತ್ರರಚನೆಯ ಜೊತೆಗೆ ಹಾಸ್ಯಪ್ರಜ್ಞೆ, ದೂರಾಲೋಚನೆ, ಚಿತ್ರಗಳಲ್ಲಿ ಶಕ್ತವಾಗಿ ಭಾವನೆಗಳನ್ನು ಅರಳಿಸುವ ಜಾಣ್ಮೆ ಇರಬೇಕು. ಅಡಿಬರಹಗಳಿಲ್ಲದ, ನೋಟದಿಂದಲೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ವ್ಯಂಗ್ಯಚಿತ್ರಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
     ಸಭೆಯಲ್ಲಿ ಹಾಸ್ಯಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರು ಮಾತನಾಡಿ, ಮಾನವನ ಎಲ್ಲಾ ಜಂಜಾಟಗಳನ್ನೂ ಮರೆಯುವಂತೆ ಮಾಡುವಲ್ಲಿ ಹಾಸ್ಯ ಮನೋಭಾವ ಸಹಕರಿಸುತ್ತದೆ.  ಹಾಸ್ಯವು ನಗುವನ್ನು ಸೃಷ್ಟಿಸುವ ಮೂಲಕ ಮಕ್ಕಳಲ್ಲಿ ಮಾನಸಿಕ ಶಕ್ತಿಯ ವೃದ್ಧಿ ಹಾಗೂ ಹಿರಿಯರಲ್ಲಿ ಆತ್ಮಸ್ಥೈರ್ಯದ ವೃದ್ಧಿ ಮಾಡುತ್ತದೆ. ಹಾಸ್ಯದಿಂದ ಸೃಷ್ಟಿಯಾಗುವ ನಗುವಿನಲ್ಲಿ ಆರೋಗ್ಯ ಅಡಗಿದೆ ಎಂದು ಹೇಳಿದರು.
      ಶಿಬಿರದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದರು. ಚುಟುಕು ರಚನೆ ಹಾಗೂ ವ್ಯಂಗ್ಯಚಿತ್ರ ರಚನೆ ವಿಭಾಗದಲ್ಲಿ ಒಟ್ಟು ಸುಮಾರು 100ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries