ಕಾಸರಗೋಡು: ಹಗಲು ಹೊತ್ತಿನಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲಸಗಾರರಿಗೆ ನವೀಕರಿಸಿದ ಕೆಲಸ ಸಮಯವನ್ನು ಮೇ 20 ರ ತನಕ ವಿಸ್ತರಿಸಲಾಗಿದೆ.
ಸೂರ್ಯನ ತಾಪದಿಂದ ಸುಟ್ಟು ಗಾಯಗಳುಂಟಾಗುವ ಸಾಧ್ಯತೆಯನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಹಗಲು ಶಿಫ್ಟ್‍ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಮಧ್ಯಾಹ್ನ 12 ರಿಂದ ಅಪರಾಹ್ನ 3 ಗಂಟೆವರೆಗೆ ವಿಶ್ರಾಂತಿ ಪಡೆಯಲು ಅವಕಾಶವೊದಗಿಸಬೇಕು. ಕೆಲಸ ಸಮಯ ಬೆಳಗ್ಗೆ 7 ಹಾಗು ಸಂಜೆ 7 ಗಂಟೆಯ ಮಧ್ಯೆ 8 ಗಂಟೆಗಳಾಗಿವೆ.
ಬೆಳಿಗ್ಗೆ ಹಾಗು ಮಧ್ಯಾಹ್ನ ನಂತರ ಶಿಫ್ಟ್‍ಗಳಲ್ಲಿ ಕಾರ್ಮಿಕರ ಕೆಲಸ ಸಮಯ 12 ಗಂಟೆಗೆ ಕೊನೆಗೊಳಿಸಿ 3 ಗಂಟೆಗೆ ಆರಂಭವಾಗುವಂತಿರಬೇಕು. ಕಾರ್ಮಿಕರಿಗೆ ಅಗತ್ಯದ ಕುಡಿಯುವ ನೀರು ಒದಗಿಸಬೇಕು. ಈ ಆದೇಶಗಳನ್ನು ಪಾಲಿಸದ ಕೆಲಸದ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಕಾರ್ಮಿಕ ಇಲಾಖಾ (ಲೇಬರ್) ಅಧಿಕಾರಿ ತಿಳಿಸಿದ್ದಾರೆ.