HEALTH TIPS

ತೀವ್ರ ಶುಚೀಕರಣ ಯಜ್ಞ: ಪದಿಯಕ್ಕಾಲ್ ನದಿಗೆ ಪುನಶ್ಚೇತನ


     ಕಾಸರಗೋಡು:  ಚೆರುವತ್ತೂರಿನ ಜೀವನದಿಯಾಗಿರುವ ಪದಿಕ್ಕಾಲ್ ನದಿ ಸಮೃದ್ಧವಾಗಿ ಹರಿಯಲು ಬೇಕಾದ ಎಲ್ಲ ವ್ಯವಸ್ಥೆಯೂ ನಡೆದಿರುವುದು ಸ್ಥಳೀಯ ಜನಜೀವನಕ್ಕೆ ಪುನಶ್ಚೇತನ ಒದಗಿಸಿದಂತಾಗಿದೆ.
       ರಾಜ್ಯ ಸರಕಾರ ಜಾರಿಗೊಳಿಸಿದ ತೀವ್ರ ಶುಚಿತ್ವ ಯಜ್ಞದ ಅಂಗವಾಗಿ ಈ ನದಿಯ ಸಮಗ್ರ ಶುಚೀಕರಣ ಎರಡು ದಿನಗಳ ಕಾಲ ನಡೆದಿದೆ. ಚೆರುವತ್ತೂರು ಗ್ರಾಮದ ಪಶ್ಚಿಮ ಭಾಗದಲ್ಲಿ ಮೂರೂವರೆ ಕಿಮೀ ಉದ್ದ ಹೊಂದಿರುವ ಈ ಹೊಳೆ ತೇಜಸ್ವಿನಿ ನದಿಯ ಕವಲಾಗಿದೆ. ಗ್ರಾಮಪಂಚಾಯತ್ ನ 5 ವಾರ್ಡ್ ಜನತೆಯ ಬದುಕಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಜಲಾಶಯ ಹಿಂದೊಂದು ಕಾಲದಲ್ಲಿ ವಾಣಿಜ್ಯ ಉದ್ದಿಮೆಗೆ ಮಾರ್ಗವೂ(ಜಲಮಾರ್ಗ ರೂಪದಲ್ಲಿ) ಆಗಿತ್ತು. ಕಾಲಕ್ರಮೇಣ ನದಿಯ ತಟದ ಮೇಲೆ ಅತಿಕ್ರಮಣ, ತ್ಯಾಜ್ಯ ತಂದು ಸುರಿಯುವುದು ಇತ್ಯಾದಿ ಕಾರಣಗಳಿಂದ ನದಿ ವಿನಾಶದ ಅಂಚಿನಲ್ಲಿ ಬಳಲುತ್ತಿತ್ತು.
     ಶುಚೀಕರಣ ಯಜ್ಞದ ಅಂಗವಾಗಿ ಶನಿವಾರ ಮತ್ತು ಭಾನುವಾರ ಈ ನದಿಯ ಸಮಗ್ರ ಶುಚೀಕರಣ ನಡೆದಿದೆ. ಜನಪ್ರತಿನಿಧಿಗಳು, ಕುಟುಂಬಶ್ರೀ, ಹರಿತ ಕ್ರಿಯಾ ಸೇನೆ ಸದಸ್ಯರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಸಾರ್ವಜನಿಕರು ಶುಚೀಕರಣ ನಡೆಸಿದ್ದಾರೆ.
      ನದಿಗೆ ಅನೇಕ ಕಾಲಗಳಿಂದ ತಂದು ಸುರಿಯಲಾಗುತ್ತಿದ್ದ ಭಾರೀ ಪ್ರಮಾಣದ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಮೇಕ್ಕೆತ್ತಿ ಸಂಗ್ರಹಿಸಿ ಬೇರೆಡೆಗೆ ರವಾನಿಸಲಾಗಿದೆ. ಭಿತ್ತಿಯ ಶುಚೀಕರಣೆಯೂ ನಡೆದಿದೆ.
        ನದಿಯ ಸಂರಕ್ಷಣೆಗೆ ಇತರ ಚಟುವಟಿಕೆಗಳನ್ನು ಕಳೆದ ವರ್ಷದಿಂದಲೇ  ಆರಂಭಿಸಲಾಗಿದೆ. ಮುಂದಿನ ವರ್ಷಗಳಲ್ಲಿ ನದಿ ನಿರ್ಮಲವಾಗಿಯೇ ಇರುವಂತೆ ನೋಡಿಕೊಳ್ಳುವ ಯೋಜನೆ ಗ್ರಾಮಪಂಚಾಯತ್ ಜಾರಿಗೊಳಿಸಲಿದೆ ಎಂದು ಪದಾಧಿಕಾರಿಗಳು ತಿಳಿಸಿದರು. ಇದು ಮತ್ತೊಮ್ಮೆ ಸಮೃದ್ಧವಾದ ಪದಿಕ್ಕಾಲ್ ನದಿಯ ಹರಿಯುವಿಕೆಯನ್ನು ನೋಡುವ ಭಾಗ್ಯವನ್ನು ಸ್ಥಳೀಯರಿಗೆ ಒದಗಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries