ಕುಂಬಳೆ: ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ 19 ನೇ ವರ್ಷದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಭಾನುವಾರ ನಡೆಯಿತು. ವೇದಮೂರ್ತಿ ಶಂಕರನಾರಾಯಣ ಶರ್ಮ ನಿಡುಗಳ ಇವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿದವು. ಈ ಸಂದರ್ಭದಲ್ಲಿ ಇವರನ್ನು ದೇವಾಲಯದ ಅಧ್ಯಕ್ಷ ಶಂಕರನಾರಾಯಣ ಭಟ್ ಹೊಸಮನೆ ಶಾಲು ಫಲ ತಾಂಬೂಲಗಳನ್ನು ಕೊಟ್ಟು ಗೌರವಿಸಿದರು. ಕಾರ್ಯಕ್ರಮದ ಅಂಗವಾಗಿ ಸ್ವಸ್ತಿ ಶ್ರೀ ಕಲಾ ಪ್ರತಿಷ್ಠಾನ ಎಡನಾಡು ಇವರಿಂದ ಭೀಷ್ಮಾರ್ಜುನ ಎಂಬ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು. ಬಾಲಕಲಾವಿದ ಷಣ್ಮಖ ಕೃಷ್ಣ ಆರೋಳಿ ಹಾಗೂ ರೋಹಿಣಿ ದಿವಾಣ ಶ್ವಶಂಕರ ಭಟ್ ಇವರ ಭಾಗವತಿಕೆ ಪ್ರಮುಖ ಆಕರ್ಷಣೆಯಾಗಿತ್ತು.
ಶಡ್ರಂಪಾಡಿಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಸಂಪನ್ನ
0
ಮೇ 21, 2019