ಮುಳ್ಳೇರಿಯ: ರಾಗಸುಧಾರಸ ಕಾಸರಗೋಡು ಇದರ ನೇತೃತ್ವದಲ್ಲಿ, ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಕಾರದೊಂದಿಗೆ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯುತ್ತಿರುವ ಸಂಗೀತ ಶಿಬಿರ ಇಂದು(ಮೇ 12) ಕೊನೆಗೊಳ್ಳಲಿದೆ.
ಇಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಶಂಕರ್ ರಾಜ್ ಆಲಂಪಾಡಿ ಅಧ್ಯಕ್ಷತೆ ವಹಿಸುವರು. ಡಾ. ಶ್ರೀಪತಿ ಕಜಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ಕಲಾನಿಧಿ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ ಚೆನ್ನೈ, ಕಲೈಮಾಮಣಿ ವಿಠಲ್ ರಾಮಮೂರ್ತಿ ಚೆನ್ನೈ ಭಾಗವಹಿಸುವರು.
ಸಂಜೆ 4ಕ್ಕೆ ನಡೆಯುವ ಕರ್ನಾಟಕ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ಕಲಾನಿಧಿ ಟಿ.ವಿ.ಶಂಕರನಾರಾಯಣನ್ ಚೆನ್ನೈ, ವಯಲಿನ್‍ನಲ್ಲಿ ಕಲೈಮಾಮಣಿ ವಿಠಲ್ ರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ನೈವೇಲಿ ನಾರಾಯಣನ್ ಚೆನ್ನೈ, ಘಟಂನಲ್ಲಿ ವಿದ್ವಾನ್ ಜಿ.ಎಸ್.ರಾಮಾನುಜಂ ಮೈಸೂರು ಭಾಗವಹಿಸುವರು.