ಕಾಸರಗೋಡು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಗೊಳ್ಳುವ ಮೇ 23ರಂದು ವಿಜೇತ ಅಭ್ಯರ್ಥಿಯ ಪಕ್ಷ ಮಾತ್ರ ಮೆರವಣಿಗೆ ನಡೆಸಲು ಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾಧಿಕರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾಗುವ ರಾಜಕೀಯ ಪಕ್ಷ ಸಂಬಂಧ ಮೆರವಣಿಗೆ ಮೇ 24ರಂದು ನಡೆಸಬಹುದಾಗಿದೆ. ಬೇಕಲ ಠಾಣೆ ವ್ಯಾಪ್ತಿಯಲ್ಲಿ 23, 24 ರಂದು ನಿಷೇದಾಜ್ಞೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 23,24 ರಂದು 144 ಪ್ರಕಾರ ನಿಷೇದಾಜ್ಞೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.