ಕೋಜಿಕೋಡ್: ಕೇಂದ್ರದಲ್ಲಿ ರಾಷ್ಟ್ರೀಯ ಡೆಮಾಕ್ರಟಿಕ್ ಮೈತ್ರಿಕೂಟ(ಎನ್ ಡಿಎ) ಕೇರಳದಲ್ಲಿ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್(ಯುಡಿಎಫ್) ಹೆಚ್ಚು ಸ್ಥಾನ ಪಡೆಯುವ ಭವಿಷ್ಯ ವಾಣಿ ನಿಜವಾದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ಸ್ರ್ವಾದಿ) ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಎರಡು ಪಕ್ಷಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆಯಿದೆ.
ಈಗ ಪ್ರಕಟವಾಗಿರುವ ಮತದಾನೋತ್ತರ ಸಮೀಕ್ಷೆಗಳು ನಿಜವಾದರೆ ಮಾನ್ಯತೆ ಕಳೆದುಕೊಳ್ಳುವ ಆತಂಕ ಈ ಎರಡೂ ಪಕ್ಷಗಳ ನಾಯಕರನ್ನು ಕಾಡುತ್ತಿದೆ.
ಚುನಾವಣಾ ಆಯೋಗ ಸೂಚಿಸಿರುವ ನಿಯಮಗಳ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಶೇಕಡ 2ರಷ್ಟು ಮತ ಪಡೆದು ಮೂರು ರಾಜ್ಯದಲ್ಲಿ 11 ಸ್ಥಾನಗಳನ್ನು ಗಳಿಸಬೇಕು. ಲೋಕಸಭೆ ಅಥವಾ ವಿಧಾನಸಭೆಗೆ ಸಾಮಾನ್ಯ ಚುನಾವಣೆಗಳಲ್ಲಿ, ಪಕ್ಷವು ನಾಲ್ಕು ರಾಜ್ಯಗಳಲ್ಲಿ ಆರು ಪ್ರತಿಶತ ಮತಗಳನ್ನು ಮತ್ತು ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.
ಮತದಾನಕ್ಕೆ ಮುಂಚೆಯೇ, ಚುನಾವಣೆ ನಂತರದ ಚುನಾವಣೆಯ ಸಮೀಕ್ಷೆಯಲ್ಲಿಯೂ ಸಿಪಿಎಂ(ಎಂ) ಕೇರಳದ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅಸಂಭವವಾಗಿದೆ. ಮತ್ತೊಂದೆಡೆ ಸಿಪಿಐ ತನ್ನ ಅಭ್ಯರ್ಥಿಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿಲ್ಲ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಿಂದ ಸಿಪಿಐ(ಎಮ್) ಎರಡು ಅಥವಾ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು ಇದೇ ನಿಜವಾದರೆ ಲೋಕಸಭೆಯಲ್ಲಿ ಪಕ್ಷದ ಸಂಸದರ ಸಂಖ್ಯೆ 8ಕ್ಕೆ ನಿಲ್ಲಬಹುದು.
ಆದರೆ ರಾಷ್ಟ್ರೀಯ ಸ್ಥಾನಮಾನ ಉಳಿಸಿಕೊಳ್ಳಲು 11ಸದಸ್ಯರ ಆಯ್ಕೆ ಅವಶ್ಯಕವಾಗಿದೆ. ಇದರರ್ಥ ಚುನಾವಣೆ ಫಲಿತಾಂಶಗಳು ಲೆಕ್ಕಚಾರದಂತೆ ನಾಳೆ ಹೀಗೆಯೇ ಬಂದರೆ ಸಿಪಿಐ(ಎಂ) ಮತ್ತು ಸಿಪಿಐ ಎರಡು ಪಕ್ಷಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಆತಂಕ ನಾಯಕರನ್ನು ಕಾಡುತ್ತಿದೆ.