ಕಾಸರಗೋಡು: ಪ್ಲಸ್ ವನ್ ಪ್ರವೇಶಾತಿಗೆ ಏಕಗವಾಕ್ಷಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೈಯರ್ ಸೆಕೆಂಡರಿ ಕೆರಿಯರ್ ಗೈಡೆನ್ಸ್ ಮತ್ತು ಅಡೋಲಸೆಂಟ್ ಕೌನ್ಸಿಲಿಂಗ್ ಸೆಲ್ "ಫೋಕಸ್ ಪೋಯಿಂಟ್" ಹೆಲ್ಪ್ ಡೆಸ್ಕ್ ಆರಂಭಿಸಲಿದೆ.
ಕಾಸರಗೋಡು ತಾಲೂಕು ಮಟ್ಟದ ಹೆಲ್ಪ್ ಡೆಸ್ಕ್ ಇಂದಿನಿಂದ (ಮೇ 9ರಿಂದ) 16 ವರೆಗೆ ನಾಯ್ಮಾರುಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಟುವಟಿಕೆ ನಡೆಸಲಿದೆ. ವಿದ್ಯಾರ್ಥಿಗಳ ಸಂಶಯ ದೂರೀಕರಿಸಿ, ಸರಿಯಾದ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ಈ ಹೆಲ್ಪ್ ಡೆಸ್ಕ್ ಪ್ರಯೋಜನಕಾರಿಯಾಗಲಿದೆ.
ಪ್ಲಸ್ ವನ್ ಗೆ ಏಕಗವಾಕ್ಷಿ ರೂಪದಲ್ಲಿ ಅರ್ಜಿ ಸಲ್ಲಿಸುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗಾಗಿ ಒಂದು ಓರಿಯಂಟೇಶನ್ ತರಗತಿ ಮೇ 10ರಂದು ಬೆಳಗ್ಗೆ 10 ಗಂಟೆಗೆ ಡೆಸಲಾಗುವುದು. ಏಕಗವಾಕ್ಷಿ ಪ್ರವೇಶಾತಿ ಸೌಲಭ್ಯ ಸಂಬಂಧ ವಿವಿಧ ಕ್ಯಾಂಪಸ್ ಗಳ ಕುರಿತು ನೌಕರಿ ಸಾಧ್ಯತೆಯ ಕುರಿತು ಬೆಳಕು ಚೆಲ್ಲುವ ಓರಿಯಂಟೇಶನ್ ತರಗತಿ ವಿದ್ಯಾರ್ಥಿಗಳ ಭವಿತವ್ಯಕ್ಕೆ ಪೂರಕವಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.