ಕುಂಬಳೆ: ಸರಕಾರಿ ನೌಕರರಿಗೆ ಮತ್ತು ಅಧ್ಯಾಪಕರಿಗೆ 2018 ಜನವರಿ ತಿಂಗಳಲ್ಲಿ ನೀಡಬೇಕಾದ ತುಟ್ಟಿಭತ್ಯೆಯನ್ನು ಚುನಾವಣಾ ಸಮಯದಲ್ಲಿ ನೀಡಲಾಗುತ್ತದೆ ಎಂದು ಹೇಳಿದ ಸರಕಾರವು ಚುನಾವಣಾ ಸಮಯವು ಭತ್ಯೆ ನೀಡಲು ಮರೆತಿದೆ. ಸರಕಾರದ ಇಂತಹ ನೀತಿಯನ್ನು ಎನ್.ಟಿ.ಯು(ರಾಷ್ಟ್ರೀಯ ಅಧ್ಯಾಪಕರ ಸಂಘಟನೆ) ಕಾಸರಗೋಡು ಜಿಲ್ಲಾ ಸಮಿತಿ ಖಂಡಿಸುತ್ತದೆ ಎಮದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂಬಳೆ ಶಾಂತಿಪಳ್ಳ ಮಂದಾರ ನಿವಾಸದಲ್ಲಿ ಸೇರಿದ ಎನ್.ಟಿ.ಯು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತುಟ್ಟಿಭತ್ಯೆಯನ್ನು ನಗದುರೂಪದಲ್ಲಿ ನೀಡಬೇಕು, ಇದಕ್ಕೆ ತುರ್ತು ಕ್ರಮವನ್ನು ಕೈಗೊಳ್ಳಬೇಕು ಎಂದು ಎನ್.ಟಿ.ಯು ಆಗ್ರಹಿಸಿದೆ. ಎನ್.ಟಿ.ಯು ಜಿಲ್ಲಾಧ್ಯಕ್ಷ ಕುಞಂಬು ಮಾಸ್ತರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ವಿಘ್ನೇಶ್ವರ ಕೆದುಕೋಡಿ, ಪ್ರಭಾಕರನ್ ನಾಯರ್, ಜಿಲ್ಲಾ ಸಮಿತಿ ಸದಸ್ಯರಾದ ಉಮಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಐ.ಮಹಾಬಲ ಭಟ್ ವಂದಿಸಿದರು.