ಬೆಂಗಳೂರು: ಬಿಜೆಪಿಯ ಭರ್ಜರಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿರುವ ಅದರ ಮಾತೃ ಸಂಸ್ಥೆ ಆರ್ ಎಸ್ ಎಸ್, ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ. ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇದು ದೇಶ ರಕ್ಷಣೆ ಮಾಡುವ ಶಕ್ತಿಗಳ ಗೆಲುವು ಎಂದು ಹೇಳಿದೆ.
ಈ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ ಆರ್ ಎಸ್ ಎಸ್, ಈ ಫಲಿತಾಂಶ ಪ್ರಜಾಪ್ರಭುತ್ವದ ಆತ್ಮ ಮತ್ತು ಅದರ ತತ್ವಗಳನ್ನು ಜಗತ್ತಿಗೆ ತೋರಿಸಿದ ಎಂದು ಆರ್ ಎಸ್ ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಮಾನವೀಯತೆಯ ಗೆಲುವನ್ನು ಇಲ್ಲಿ ಕಾಣಬೇಕಾಗಿದೆ ಎಂದಿದ್ದಾರೆ.