HEALTH TIPS

ಸರ್ಪಮಲೆ ಅಂಗನವಾಡಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಶಿಬಿರ

       ಪೆರ್ಲ:ಎಣ್ಮಕಜೆ ಗ್ರಾ.ಪಂ.8ನೇ ವಾರ್ಡ್ ಕಜಂಪಾಡಿ ಸರ್ಪಮಲೆ ಅಂಗನವಾಡಿಯಲ್ಲಿ ಶನಿವಾರ ಸ್ವಚ್ಛ ಭಾರತ ಅಭಿಯಾನ ಶಿಬಿರ ನಡೆಯಿತು.
     ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸಿ ವಾರಣಾಸಿಯ ಗಂಗಾ ತಟದಲ್ಲಿನ ಸ್ವಚ್ಛತೆಗೆ ಚಾಲನೆ ನೀಡಿದ್ದಾರೆ. ನೈರ್ಮಲೀಕರಣದ ಅನಿವಾರ್ಯತೆ ಮನಗೊಂಡ ಪ್ರಧಾನಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶೌಚಾಲಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದಾರೆ. ವಿವಿಧ ಕ್ಷೇತ್ರಗಳ ಜನರು ಸ್ವಇಚ್ಛೆಯಿಂದ ಸಾಮೂಹಿಕ ಸ್ವಚ್ಛ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಹಿಡಿದು ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಕೈಜೋಡಿಸಿದ್ದಾರೆ.ಸ್ವಚ್ಛತೆ ಎಂಬುದು ನಮ್ಮಿಂದಲೇ ಆರಂಭವಾಗಬೇಕು.ಮನೆ, ಊರು, ಗ್ರಾಮ ಸ್ವಚ್ಛವಾದಲ್ಲಿ ಸ್ವಚ್ಛ ಭಾರತ ಅಭಿಯಾನ ಅರ್ಥಪೂರ್ಣವಾಗುವುದು ಎಂದು ಹೇಳಿ ಸ್ವಚ್ಛತೆಯ ಮಹತ್ವ ವಿವರಿಸಿದರು.
     ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ಅಧಿಕಾರಿ ಹರೀಶ್, ಸಿಬ್ಬಂದಿಗಳು, ಆಶಾ, ಅಂಗನವಾಡಿ, ಕುಟುಂಬಶ್ರೀ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries