ಉಪ್ಪಳ: ದುರಸ್ತಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮುಳಿಗದ್ದೆಯಿಂದ ಬೆರಿಪದವು ವರೆಗಿನ ರಸ್ತೆಯಲ್ಲಿ ವಾಹನಸಂಚಾರ ನಾಳೆ(ಮೇ 9)ಯಿಂದ 15 ದಿನಗಳ ಮಟ್ಟಿಗೆ ನಿಷೇಧಿಸಲಾಗಿದೆ. ಈ ರಸ್ತೆಯಲ್ಲಿ ತೆರಳುವ ವಾಹನಗಳು ಸೌಕರ್ಯದ ಇತರ ರಸ್ತೆಗಳ ಮೂಲಕ ಸಾಗಬೇಕೆಂದು ಲೋಕೋಪಯೋಗಿ ಇಲಾಖೆಯ ರಸ್ತೆ ಉಪವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುವರು.