HEALTH TIPS

ಶ್ರದ್ದಾ ಕೇಂದ್ರಗಳ ಅಭಿವೃದ್ಧಿಯಿಂದ ನಾಡಿನಲ್ಲಿ ಶಾಂತಿ- ಎಸ್.ಎನ್.ಕಡಂಬಾರ್


      ಮಂಜೇಶ್ವರ: ಶ್ರದ್ದಾ ಕೇಂದ್ರಗಳ ಅಭಿವೃದ್ಧಿಯಿಂದ ನಾಡಿನೆಲ್ಲೆಡೆ ದೈವಿಕ ಶಕ್ತಿ ವೃದ್ದಿಯಾಗಿ ಶಾಂತಿ ಸೌಹಾರ್ದ ನೆಲೆನಿಲ್ಲುತ್ತದೆ. ಶ್ರದ್ದಾ ಕೇಂದ್ರಗಳಲ್ಲಿ ಸಮಾನತೆಯಿಂದ ಯಾವುದೇ ಜಾತಿ ಭೇದ,  ಬಡವ ಬಲ್ಲಿದ ಬೇಧವಿಲ್ಲದೆ  ಭಗವಂತನಿಗೆ ಶರಣಾಗಿ ಏಕೋಭಾವದಿಂದ ದುಡಿಯುತ್ತಿರುವುದರಿಂದ ಊರಲ್ಲಿ ಐಕ್ಯತೆ ಸಮಾನತೆ ನೆಲೆಗೊಳ್ಳುತ್ತದೆ. ಆರಾಧನಾಲಯಗಳು ಕೇವಲ ಧಾರ್ಮಿಕ ಕೇಂದ್ರಮಾತ್ರವಾಗಿರದೆ, ಸಂಸ್ಕಾರವನ್ನು ನೀಡುವ ಹಾಗೂ ದೀನದಲಿತರಿಗೆ ಸೇವೆಯನ್ನು ಒದಗಿಸುವ ಕೇಂದ್ರಗಳಾಗಿ ಬೆಳಗಬೇಕಾಗಿದೆ ಎಂದು ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಎನ್. ಕಡಂಬಾರ್ ಅಭಿಪ್ರಾಯ ಪಟ್ಟರು.
    ಜೀರ್ಣಗೊಂಡ ಆರಾಧನಾಲಯಗಳು ಸದ್ಬಕ್ತರ ನೆರವಿನೊಂದಿಗೆ ಜೀರ್ಣೋದ್ದಾರಗೊಳ್ಳಲಿ. ತನ್ಮೂಲಕ ಭಜಕರ ಸಂತೃಪ್ತಿಗೆ ಕಾರಣವಾಗುವ ಸುಭಿಕ್ಷ ನೆಲೆಗೊಳ್ಳುವುದು. ಯುವ ಸಮೂಹ ದೈವ ಭಕ್ತಿಯ ಮೂಲಕ ಸನ್ಮಾರ್ಗದಲ್ಲಿ ನಡೆಯುವ ಶಕ್ತಿಯನ್ನು ಪಡೆಯುವಂತಾಗಲಿ ಎಂದು ಅವರು ಈ ಸಂದರ್ಭ ಆಶಯ ವ್ಯಕ್ತಪಡಿಸಿ ಹಾರೈಸಿದರು.
    ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನದ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಬುಧವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
       ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಪ್ರೇಮಾ.ಕೆ. ಭಟ್ ತೊಟ್ಟೆತ್ತೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಿನಿ ಬಿ ಶೆಟ್ಟಿ ಕಲ್ಲೆಕಾರು, ಕೃಷ್ಣ ಕೆ ಕೊಮ್ಮಂಗಳ, ಚಂದ್ರಾವತಿ ಕುಳೂರು, ಸುಂದರಿ ಶೆಟ್ಟಿ ಕಡಂಬಾರು, ನ್ಯಾಯವಾದಿ. ವಿಠಲ ಭಟ್ ಮೊಗಸಾಲೆ, ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ ಕಯ್ಯಾರು, ರಾಮಚಂದ್ರ ಸಿ ಚೆರುಗೋಳಿ, ವಿದ್ಯುತ್ ಪ್ರಸರಣ ಇಲಾಖೆಯ ಹಿರಿಯ ಅಭಿಯಂತರ ಕುಮಾರ ಸುಬ್ರಹ್ಮಣ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಡಾ.ನಾರಾಯಣ ಭಟ್ ಶಿರಸಿ ತೊಟ್ಟೆತ್ತೋಡಿ, ವಾಮಯ ಪೂಜಾರಿ ಕಲ್ಲಗದ್ದೆ ಬುಡ್ರಿಯ, ಸತೀಶ್ ಚಂದ್ರ ರೈ ದೇರಂಬಳ, ಸುಧಾಕರ ಶೆಟ್ಟಿ ದೇರಂಬಳ ಗುತ್ತು ಉಪಸ್ಥಿತರಿದ್ದರು.
     ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ ಕಲ್ಲಿನ ಕೆತ್ತನೆ ಮಾಡಿದ ಕುಬೇರನ್ ಮೇಸ್ತ್ರಿ ಶಿರಸಿ, ಮರದ ಕೆತ್ತನೆಗಳನ್ನು ಮಾಡಿದ ಬಾಬುರಾಯ ಆಚಾರ್, ಪ್ರವೀಣ ಆಚಾರ್ ಹಾಗೂ ಬಳಗದವರನ್ನು ಕುಮಾರ ಸುಬ್ರಹ್ಮಣ್ಯ ಹಾಗೂ ಗಣ್ಯರು ಗಣ್ಯರ ಸಮಕ್ಷಮ ಸನ್ಮಾನಿಸಿ ಅಭಿನಂದಿಸಲಾಯಿತು.
     ವಸಂತ ಭಟ್ ತೊಟ್ಟೆತ್ತೋಡಿ ಸ್ವಾಗತಿಸಿ, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ನಿರೂಪಿಸಿ ದುರ್ಗಾಪ್ರಸಾದ್ ಬುಡ್ರಿಯ ವಂದಿಸಿದರು. ರಾಜಾರಾಮ ರಾವ್ ಚಿಗುರುಪಾದೆ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.
    ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ ಗಂಟೆ 2.30ರಿಂದ ಸತೀಶ ಅಡಪ ಸಂಕಬೈಲು ಅವರ ಸಂಯೋಜನೆಯಲ್ಲಿ ವೀರಮಣಿಕಾಳಗ ತಾಳಮದ್ದಳೆ, ರಾತ್ರಿಗಂಟೆ 9ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ವೈವಿಧ್ಯ ಹಾಗೂ ರಾತ್ರಿ 11ರಿಂದ ತುಳುವೆರೆ ತುಡರ್ ಕಲಾತಂಡ ಸುರತ್ಕಲ್ ತಂಡದ ತುಳು ನಾಟಕ ಕೊಪ್ಪರಿಗೆ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries