HEALTH TIPS

ಟಿವಿಷನ್ ಗಳಿಲ್ಲದೆ ಗರಿಷ್ಠ ಅಂಕಗಳಿಸಿದ ಬೇಕೂರು ಶಾಲಾ ವಿದ್ಯಾರ್ಥಿಯ ಸಾಧನೆಗೆ ಶ್ಲಾಘನೆ

   
            ಉಪ್ಪಳ: 2019ರ ಕೇರಳ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲಿ ಎ-ಪ್ಲಸ್ ಪಡೆದ  ಬೇಕೂರು ಹೈಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯಶ್ರೀ ಉಬರಳೆ ಯಾವುದೇ ಟ್ಯೂಶನ್ ತರಬೇತಿಗಳಿಲ್ಲದೆ ಕೇವಲ ಅಧ್ಯಾಪಕರ ಸೂಕ್ತ ಮಾರ್ಗದರ್ಶನದೊಂದಿಗೆ ಲಭಿಸಿದ ಸಾಧನೆಯು ಅಭಿನಂದನಾರ್ಹಳಾಗಿದ್ದಾಳೆ. ಇತ್ತೀಚೆಗೆ ಜರಗಿದ ರಾಮಾಯಣ ಪರೀಕ್ಷೆಯಲ್ಲೂ ಮಂಜೇಶ್ವರ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ, ಹೈಸ್ಕೂಲ್ ವಿಭಾಗದ ಶಾಸ್ತ್ರೀಯ ಸಂಗೀತದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ, ಚಿತ್ರರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಬಹುಮಾನ ಗಳಿಸಿದ್ದಾಳೆ. ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ, ಶಾಸ್ತ್ರೀಯ ಸಂಗೀತದ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಹೊಂದಿ ಇದೀಗ ಸೀನಿಯರ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. ನನ್ನ ಸಾಧನೆಗೆ ಸ್ಪೂರ್ತಿ ನನ್ನ ಅಕ್ಕ ಎಂದು ಹೆಮ್ಮೆಯಿಂದ ಹೇಳುವ ಈಕೆ  ತನಗೆ ಕಲಿಸಿದ ಎಲ್ಲಾ ಗುರುಗಳೂ ಪ್ರತೀ ಹಂತದಲ್ಲೂ ಪೆÇ್ರೀತ್ಸಾಹ, ಬೆಂಬಲ ನೀಡಿರುತ್ತಾರೆ ಎಂದು ತಿಳಿಸಿದ್ದಾಳೆ. ಮುಂದೆ ಅಧ್ಯಾಪಿಕೆಯಾಗಬೇಕೆಂಬ ಹಂಬಲ ವ್ಯಕ್ತಪಡಿಸುವ ಈಕೆ ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಉಬರಳೆ ನಿವಾಸಿ ಕೃಷಿಕ ದುರ್ಗಾಪ್ರಸಾದ್-ಅಧ್ಯಾಪಿಕೆ ವಿಜಯಲಕ್ಷ್ಮಿ ದಂಪತಿ ಪುತ್ರಿಯಾಗಿದ್ದಾಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries