ಮಧೂರು: ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಹಾಗೂ ವಿಶ್ವಕರ್ಮ ಸಾಹಿತ್ಯ ದರ್ಶನ ಸಮೂಹ ಜಂಟಿ ಆಶ್ರಯದಲ್ಲಿ ನಾಳೆ(ಮೇ 4ರಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಉಳಿಯತ್ತಡ್ಕದ ಗುರುಕೃಪಾ ನಿವಾಸದಲ್ಲಿ "ಸಂಸ್ಕೃತಿ ಸಂವರ್ಧನಾ ಸಂವಾಹಕ ಶಿಬಿರ" ವನ್ನು ಆಯೋಜಿಸಿದೆ.
ವಿಶೇಷವಾಗಿ ಹೆಣ್ಮಕ್ಕಳಿಗೆ ಹಾಗೂ ಮಾತೆಯರಿಗೆ ಇರುವ ನಿತ್ಯ ಕರ್ಮಾನುಷ್ಠಾನಗಳು ದೇವತಾ ವಿಶೇಷ ಪ್ರಾರ್ಥನಾ ಶ್ಲೋಕಗಳು, ಸಂಸ್ಕೃತಿ ಯೋಗ್ಯವಾದ ಉಡುಗೆ-ತೊಡುಗೆಗಳನ್ನು ಧರಿಸುವುದೇಕೆ ಅದರ ಫಲಾನುಫಲಗಳೇನು, ನಮ್ಮ ಸಂಸ್ಕೃತಿಯ ಹಬ್ಬ ಹರಿದಿನಗಳು ಯಾವುವು, ಆಚರಣೆಯಿಂದ ಲಭಿಸುವ ಲಾಭಗಳು ಇವೇ ಮೊದಲಾದ ಮೌಲ್ಯಾಧಾರಿತ ವಿಷಯಗಳ ಬಗ್ಗೆ ಶಿಬಿರದಲ್ಲಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಶಿಬಿರದಲ್ಲಿ ಉಚಿತ ಚಾ,ಊಟ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.