ಕುಂಬಳೆ: ಬಾಡೂರು ಗ್ರಾಮದ ಇತಿಹಾಸ ಪ್ರಸಿದ್ದ ಬಾಡೂರು ಚಾವಡಿಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲು ಬೂಡು ಪ್ರಕಾಶ ಕಡಮಣ್ಣಾಯರ ನೇತೃತ್ವದಲ್ಲಿ ಶ್ರೀಜಟಾಧಾರಿ ದೈವದ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಮೈಮೆ ಗುರುವಾರ ಮತ್ತು ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ 6 ರಿಂದ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಪ್ರಸಾದ ಭೋಜನ ನೆರವೇರಿತು.
ಶುಕ್ರವಾರ ಬೆಳಿಗ್ಗೆ 8.30ರಿಂದ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಶ ಪೂಜೆ, ಪ್ರಸಿಷ್ಠಾವ ಹೋಮ ನಡೆಯಿತು. ಬಳಿಕ 8.45ರ ಶುಭಮುಹೂರ್ತದಲ್ಲಿ ಶ್ರೀಜಟಾಧಾರಿ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯ ನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಿತು. ಮಧ್ಯಾಹ್ನ 1.30ರಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ 8ರಿಂದ ಬಾಡೂರು ಮನೆಯಿಂದ ಶ್ರೀಜಟಾಧಾರಿ ದೈವದ ಭಂಡಾರ ಹೊರಟು ಚಾವಡಿಯಲ್ಲಿ ಏರುವುದು, 8.30ರಿಂದ ನವಕಾಭಿಷೇಕ, ತಂಬಿಲ, 9.30ರಿಂದ ಅನ್ನಸಂತರ್ಪನೆ, ರಾತ್ರಿ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಿತು.
ಶನಿವಾರ ಮುಂಜಾನೆ 3ಕ್ಕೆ ಶ್ರೀಜಟಾಧಾರಿ ದೈವದ ಮೈಮೆ ನಡೆಯಿತು. 6ಕ್ಕೆ ಕೊರತಿ ಕೋಲ, 8ರಿಂದ ಭಂಡಾರ ಇಳಿಯುವುದು ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ 11 ರಿಂದ ಕಾಪು ರಂಗತರಂಗ ಕಲಾವಿದರಿಂದ ಪೊಪ್ಪ ತುಳು ನಾಟಕ ಪ್ರದರ್ಶನ ನಡೆಯಿತು.