ಕುಂಬಳೆ: ಕೇಂದ್ರದಲ್ಲಿ ಸತತ ಎರಡನೇ ಬಾರಿ ಭಾರತೀಯ ಜನತಾ ಪಕ್ಷವು ಭರ್ಜರಿ ವಿಜಯದೊಂದಿದೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕುಂಬಳೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಕುಂಬಳೆಯಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ರಾಜ್ಯ ಸಮಿತಿ ಸದಸ್ಯರಾದ ಕುಂಟಾರು ರವೀಶ್ ತಂತ್ರಿ, ಸುರೇಶ ಕುಮಾರ ಶೆಟ್ಟಿ ಪೂಕಟ್ಟೆ, ಬಾಲಕೃಷ್ಣ ಶೆಟ್ಟಿ, ನೇತಾರರಾದ ಸತ್ಯಶಂಕರ ಭಟ್ ಹಿಳ್ಳೆಮನೆ, ವಿನೋದನ್, ಎ.ಕೆ.ಕಯ್ಯಾರ್, ರಮೇಶ್ ಭಟ್, ಮುರಳೀಧರ ಯಾದವ್ ನಾಯ್ಕಾಪು, ಕುಂಬಳೆ ಬಿಜೆಪಿ ಅಧ್ಯಕ್ಷರಾದ ಕೆ.ಶಂಕರ ಆಳ್ವ, ಪ್ರದಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದರು.