ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತ್ ಕೃಷಿ ಭವನ ವ್ಯಾಪ್ತಿಯಲ್ಲಿ ಕೃಷಿ ಅಗತ್ಯಕ್ಕಾಗಿ ವಿದ್ಯುತ್ ಸಂಪರ್ಕ ಉಚಿವಾಗಿ ಪಡೆಯುತ್ತಿರುವ ಕೃಷಿಕರು ಅವರ ಕೃಷಿ ಸಂಪರ್ಕ ಸೌಲಭ್ಯವನ್ನು ನವೀಕರಿಸಲು ಸೂಚನೆ ನೀಡಲಾಗಿದೆ.
ನವೀಕರಣ ಸಂಬಂಧ ಅರ್ಜಿ, ಈ ವರ್ಷ ಶುಲ್ಕ ಪಾವತಿಸಿದ ರಶೀದಿ, ವಿದ್ಯುತ್ ಶುಲ್ಕ ಪಾವತಿಸಿದ ರಶೀದಿ ಇತ್ಯಾದಿಗಳ ಸಹಿತ ಮೇ 30 ರ ಮುಂಚಿತವಾಗಿ ಕೃಷಿ ಭವನದಲ್ಲಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಸಂಪರ್ಕ ನವೀಕರಿಸದೇ ಇರುವ ಕೃಷಿಕರಿಗೆ ಉಚಿತ ವಿದ್ಯುತ್ ಸಂಪರ್ಕ ಲಭಿಸುವುದಿಲ್ಲ ಎಂದು ಕೃಷಿ ಭವನದ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.