ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ದ್ರವ್ಯಕಲಶ ಮಹೋತ್ಸವದ ಸಂದರ್ಭದಲ್ಲಿ ಕಲಾರತ್ನ ಶಂನಾ ಅಡಿಗ ಕುಂಬಳೆ ಅವರು ಹರಿಕಥಾ ಸಂಕೀರ್ತನೆ ನಡೆಸಿಕೊಟ್ಟರು. ಹಿಮ್ಮೇಳದಿಂದ ತಬಲಾದಲ್ಲಿ ಜಗದೀಶ್ ಉಪ್ಪಳ, ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ ಜೊತೆಗೂಡಿದರು. ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳು ಹಾಗೂ ಸೀತಾರಾಮ ಬಳ್ಳುಳ್ಳಾಯ ಅವರು ಶಂನಾ ಅಡಿಗರನ್ನು ಸನ್ಮಾನಿಸಿದರು. ಗೋವಿಂದ ಬಳ್ಳಮೂಲೆ ನಿರೂಪಿಸಿದರು. ಕ್ಷೇತ್ರದ ಅರ್ಚಕ ಅನಂತಪದ್ಮನಾಭ ಮಯ್ಯ ಹಾಗೂ ಸುಬ್ರಾಯ ಹೊಳ್ಳ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಸಂಘಟಿತವಾಗಿತ್ತು.
ಮುಳಿಯಾರಲ್ಲಿ ಶಂ.ನಾ ಅಡಿಗರಿಂದ ಕಥಾ ಸಂಕೀರ್ತನೆ
0
ಮೇ 27, 2019