ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಎಂ.ಕಾಂ ಪದವಿ ವಿದ್ಯಾರ್ಥಿನಿ ದಿವ್ಯಶ್ರೀ ಪಂಜ ಅವರು ಕಣ್ಣೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಂದ್ಯೋಡು ಸಮೀಪದ ಪಂಜ ನಾರಾಯಣ ಬೆಳ್ಚಪ್ಪಾಡ ಹಾಗೂ ಲಕ್ಷ್ಮೀ ದಂಪತಿಗಳ ಪುತ್ರಿಯಾದ ದಿವ್ಯಶ್ರೀಯವರ ಸಾಧನೆಗೆ ಕಾಲೇಜು ಪ್ರಾಧ್ಯಾಪಕರು, ಪ್ರಾಂಶುಪಾಲರು ಅಭಿನಂದನೆ ಸಲ್ಲಿದ್ದಾರೆ. ಪ್ರಸ್ತುತ ಸಾಲಿನ ಪದವಿ ಪರೀಕ್ಷೆಗಳಲ್ಲಿ ಮಂಜೇಶ್ವರ ಕಾಲೇಜು ಶೇ.ನೂರು ಫಲಿತಾಂಶ ದಾಖಲಿಸಿ ಸಾಧನೆ ಮೆರೆದಿದೆ.
ಕಣ್ಣೂರು ವಿವಿ ಪದವಿ ಪರೀಕ್ಷೆಯಲ್ಲಿ ದಿವ್ಯಶ್ರೀ ಪಂಜ ಮೂರನೇ ರ್ಯಾಂಕ್
0
ಮೇ 11, 2019