ಕಾಸರಗೋಡು: ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಸುಡುವ ಬಿಸಿಲಿನ ಬೇಗೆ ಜತೆಗೆ ಬೇಸಿಗೆ ಮಳೆ ಸುರಿದು ಅಲ್ಪ ತಂಪೆರಚಿದರೂ ಈ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಹರಡಲು ಸಾಧ್ಯತೆ ಇದೆಯೆಂದು ಮುನ್ಸೂಚನೆ ನೀಡಲಾಗಿದೆ.
ರಬ್ಬರ್ ತೋಟಗಳಲ್ಲಿ ಹಾಲು ಸಂಗ್ರಹಿಸುವ ಗೆರಟೆ ಹಾಗು ಕಂಗಿನ ತೋಟಗಳಲ್ಲಿ ಹಾಳೆಗಳಲ್ಲಿ ಸೃಷ್ಟಿಯಾಗುವ ಸೊಳ್ಳೆಗಳಿಂದ ರೋಗಾಣು ಹರಡುವ ಸಾಧ್ಯತೆ ಇದೆಯೆಂದು ವೆಳ್ಳರಿಕುಂಡ್ ಪ್ರಾಥಮಿಕ ಆರೋಗ್ಯ ಅ„ಕಾರಿಗಳು ನಡೆಸಿದ ತಪಾಸಣೆಯಲ್ಲಿ ತಿಳಿದು ಬಂದಿದೆ.
ಆಶಾ, ಕುಟುಂಬಶ್ರೀ, ಆರೋಗ್ಯ ಕಾರ್ಯಕರ್ತರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಮನೆಗಳಿಗೆ ತಲುಪಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಕಳೆದ ವರ್ಷ ಬಳಾಲ್ ಪಂಚಾಯತ್‍ನಲ್ಲಿ 300 ರಷ್ಟು ಮಂದಿಗೆ ಡೆಂಗ್ಯೂ ಜ್ವರ ಬಾಧಿಸಿತ್ತು.