HEALTH TIPS

ಮಾನ್ಯದಲ್ಲಿ ನಾಲ್ಕು ದಶಕ ಪರಂಪರೆಯ ಯಕ್ಷಗಾನ ಬಯಲಾಟ


     ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯದಲ್ಲಿ ಬುಧವಾರ ರಾತ್ರಿ ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಪಂಚವಟಿ ಕುಶಲವರ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
    ಮಂಗಳೂರಿನಲ್ಲಿ ಖ್ಯಾತರಾಗಿದ್ದ ಪುಸ್ತಕ ವ್ಯಾಪಾರಿಗಳಾದ ದಿ.ಮಾನ್ಯ ವೆಂಕಟ್ರಾವ್ ಸ್ಮರಣಾರ್ಥ ಈ ಪ್ರದರ್ಶನ ನಡೆದಿದ್ದು, ಮೇ.8 ನೇ ದಿನಾಂಕದಂದು ಕಳೆದ 44 ವರ್ಷಗಳಿಂದ ಸತತವಾಗಿ ಈ ಪ್ರದರ್ಶನ ಮಾನ್ಯದಲ್ಲಿ ಧರ್ಮಸ್ಥಳ ಮೇಳದವರಿಂದ ಪ್ರದರ್ಶನಗೊಳ್ಳುತ್ತಿರುವುದು ವಿಶೇಷತೆಯಾಗಿದೆ.
   ಪುಸ್ತಕ ಪ್ರೇಮದ ಜೊತೆಗೆ ಯಕ್ಷಗಾನ ಪ್ರೇಮಿಗಳಾಗಿದ್ದ ಮಾನ್ಯ ವೆಂಕಟ್ರಾವ್ 1975 ರ ಸುಮಾರಿಗೆ ಮಾನ್ಯದಲ್ಲಿ ಮೊತ್ತಮೊದಲ ಬಾರಿಗೆ ಧರ್ಮಸ್ಥಳ ಮೇಳದವರಿಂದ ಹರಕೆಯ ರೂಪದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದರು. ಅದು ಮೇ.8 ನೇ ದಿನಾಂಕದಂದು. ಆ ಬಳಿಕ ಪ್ರತಿವರ್ಷ ಮೇ.8 ರಂದೇ ಮಾನ್ಯದ ಜ್ಞಾನೋದಯ ಶಾಲಾ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನ ಸತತವಾಗಿ ನಡೆಯುತ್ತಿದೆ. ಪ್ರಸ್ತುತ ವೆಂಕಟ್ರಾವ್ ಅವರ ಪುತ್ರ ರವಿಶಂಕರ ಮಾನ್ಯ ಬಯಲಾಟ ಆಯೋಜಿಸುತ್ತಾರೆ. ನಾಡಿನ ಉದ್ದಗಲದಿಂದ ನೂರಾರು ಮಂದಿ ಭಾಗವಹಿಸುತ್ತಿರುವುದು ಮಹತ್ವದ್ದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries