ನರೇಂದ್ರಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೆ : ಹೋಟೆಲ್ ಮಾಲಕನಿಂದ ದಿನವಿಡೀ ಉಚಿತ ವ್ಯಾಪಾರ
ಬದಿಯಡ್ಕ: ರಾಷ್ಟ್ರದ ಪ್ರಧಾನಿಯಾಗಿ ಎರಡನೇ ಬಾರಿ ನರೇಂದ್ರ ಮೋದಿಯವರು ಅಧಿಕಾರಕ್ಕೇರುತ್ತಿರುವ ಸಂತಸವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಂಡ ಹೋಟೆಲ್ ಮಾಲಕ ದಿನವಿಡೀ ಉಚಿತವಾಗಿ ತಿಂಡಿ, ಊಟ, ಚಹ, ಪಾನೀಯ ವಿತರಿಸಿ ಗಮನಸೆಳೆದರು.
ಎಡನೀರಿನಲ್ಲಿ ಕಳೆದ ಅನೇಕ ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿರುವ ಕೂವೆತ್ತೋಟ ಜಯರಾಮ ಭಟ್ ಎಂಬವರು ಈ ರೀತಿ ಮೋದಿಯವರ ಬಗ್ಗೆ ಅಭಿಮಾನವನ್ನು ಹೊಂದಿದವರಾಗಿದ್ದಾರೆ. ಗುರುವಾರ ಪ್ರಾತಃಕಾಲ ಗಣಪತಿ ಹೋಮವನ್ನು ನಡೆಸಿ ಮೋದಿಯವರ ಮೂಲಕ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ನಂತರ ಎಲ್ಲರಿಗೂ ಉಚಿತವಾಗಿ ದಿನದ ವಹಿವಾಟನ್ನು ನಡೆಸಿದರು. ಬದಿಯಡ್ಕ ಸಮೀಪದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಮೀಪ `ಪದ್ಮಗಿರಿ' ನಿವಾಸದಲ್ಲಿ ವಾಸಿಸುತ್ತಿರುವ ಇವರು ಮೋದಿಯವರ ಬಗ್ಗೆ ಅಪ್ಪಟ ಅಭಿಮಾನವನ್ನು ಹೊದಿರುತ್ತಾರೆ. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರವೀಶ ತಂತ್ರಿ ಕುಂಟಾರು, ಮಾಧÀವ ಹೇರಳ, ಹರೀಶ ನಾರಂಪಾಡಿ, ಸ್ಥಳೀಯರು ಬೆಳಗಿನ ಜಾವ ಉಪಸ್ಥಿತರಿದ್ದರು.
.........................................................................................................
ನರೇಂದ್ರಮೋದಿಯವರೇ ಮತ್ತೊಮ್ಮೆ ನಮ್ಮ ದೇಶದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಮನಸ್ಸಿನ ಸಂಕಲ್ಪವು ಈಡೇರಿದಾಗ ಆದ ಸಂತಸವನ್ನು ಗ್ರಾಹಕರೊಂದಿಗೆ ಹಂಚಿಕೊಂಡಿರುವುದು ಮನಸ್ಸಿಗೆ ಆನಂದವನ್ನು ತಂದಿದೆ. ದೇಶವು ಭದ್ರವಾದ ಕೈಗಳಲ್ಲಿ ಸುಭದ್ರವಾಗಿರುವುದಕ್ಕಿಂತ ಹೆಚ್ಚು ನಮಗೇನೂ ಬೇಡ. ನರೇಂದ್ರ ಮೋದಿಯವರು ಎಲ್ಲರನ್ನೂ ಒಂದುಗೂಡಿಸಿ ದೇಶವನ್ನು ಮುನ್ನಡೆಸುತ್ತಿರುವುದು ಸಂತಸದ ವಿಚಾರವಾಗಿದೆ. ಅವರಿಗೆ ದೇವರು ಒಳಿತನ್ನು ಮಾಡಲಿ.
- ಜಯರಾಮ ಭಟ್ ಕೂವೆತ್ತೋಟ, ಎಡನೀರು. ಹೋಟೆಲ್ ಮಾಲಕ