ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಚೌಕಿದಾರ್ ಪದವನ್ನು ತೆಗೆದಿದ್ದು, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮೋದಿ, ಉತ್ಸಾಹವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಈ ಉತ್ಸಾಹವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಇಟ್ಟುಕೊಳ್ಳಲಾಗುತ್ತದೆ. ಭಾರತದ ಪ್ರಗತಿಯಾಗಿ ಕೆಲಸವನ್ನು ಮುಂದುವರೆಸಬೇಕಾಗಿದೆ ಎಂದು ಹೇಳಿದ್ದಾರೆ.
ತಮ್ಮ ಟ್ವಿಟರ್ ಮುಂದಿನ ಚೌಕಿದಾರ್ ಪದವನ್ನು ತೆಗೆಯುತ್ತಿದ್ದೇನೆ. ಆದರೆ, ಅದು ನನ್ನ ಭಾಗವಾಗಿಯೇ ಉಳಿಯಲಿದೆ, ಎಲ್ಲರೂ ಚೌಕಿದಾರ್ ಪದವನ್ನು ತೆಗೆಯುವಂತೆ ಮೋದಿ ಮನವಿ ಮಾಡಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪದೇ ಪದೇ ದೇಶದ ಕಾವಲುಗಾರ ಕಳ್ಳ ಎಂದು ಟೀಕಿಸುತ್ತಿದ್ದರ ಹಿನ್ನೆಲೆಯಲ್ಲಿ ಮಾರ್ಚ್ 10 ರಂದು ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಚೌಕಿದಾರ್ ಅಭಿಯಾನವನ್ನು ಆರಂಭಿಸಲಾಗಿತ್ತು. ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ವಾಗ್ದಾಳಿ ನಡೆಸಿದ್ದರು.
2014ರ ಚುನಾವಣೆ ಸಂದರ್ಭದಲ್ಲಿ ಚೌಕಿದಾರನಾಗಿ ದೇಶದ ಜನರ ಹಿತಾಸಕ್ತಿ ಕಾಪಾಡುವುದಾಗಿ ಹೇಳಿಕೆ ನೀಡಿದ್ದರು.