ಕಾಸರಗೋಡು: ಒಳಗಣ್ಣಿನ ಬೆಳಕಲ್ಲಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಅತ್ಯುತ್ತಮ ಅಂಕಗಳಿಂದ ವಿಜೇತರಾದ 4 ಮಂದಿ ಗೆಳತಿಯರ ತಂಡ ನಾಡಿಗೆ ಮಾದರಿಯಾಗಿದ್ದಾರೆ. ಕಾಸರಗೋಡು ಸರಕಾರಿ ಅಂ`Àರ ವಿದ್ಯಾಲಯದಲ್ಲಿ ಕಲಿತ, ಆಪ್ತ ಗೆಳತಿಯರಾದ 4 ಮಂದಿಯ ಅಕ್ಷರದೀಪದಡಿಯ ಸಾ`Àನೆಯ ಹಾದಿಯಲ್ಲಿ ದೃಷ್ಟಿ ಹೀನತೆ ತಡೆಯಾಗಿಲ್ಲ.
ಪನತ್ತಡಿ ನಿವಾಸಿ ಭಾವನಾ ಭಾಸ್ಕರ್, ಕರಿವೇಡಗಂ ನಿವಾಸಿ ಎಂ.ಮೂವಂದಿ, ಕುತ್ತಿಕೋಲ್ ನಿವಾಸಿ ಎಚ್.ಸೌಮ್ಯಾ, ಮಡಿಕೈ ನಿವಾಸಿ ಕೆ.ಶ್ವೇತಾ ಇವರು ವಿಶೇಷ ಚೇತನತೆಯ ನಡುವೆಯೂ ಕಠಿಣ ಯತ್ನದ ಮೂಲಕ ಫಲವನ್ನು ಕಂಡಿದ್ದಾರೆ. ಅಕಾಡೆಮಿಕ್ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇವರ ಸಾಧನೆ ಗಮನಾರ್ಹವಾಗಿದೆ. ಕಳೆದ ಬಾರಿಯ ರಾಜ್ಯ ಮಟ್ಟದ ಸ್ಪೆಷ್ಯಲ್ ಸ್ಕೂಲ್ ಕಲೋತ್ಸವದಲ್ಲಿ ಸಮೂಹ ಗಾಯನ, ದೇಶಭಕ್ತಿಗೀತೆ ವಿಭಾಗಗಳ ಸ್ಪರ್ಧೆಯಲ್ಲಿ `ಎ' ಶ್ರೇಣಿಯೊಂದಿಗೆ ಪ್ರಥಮ ಬಹುಮಾನವನ್ನು ಈ ಗೆಳತಿಯರ ತಂಡ ಪಡೆದುಕೊಂಡಿದೆ. ದೃಷ್ಟಿ ಹೀನರಿಗಾಗಿ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಇನ್ ಕ್ಲೂಸಿವ್ ಎಜ್ಯುಕೇಶನ್ ಫಾರ್ ದಿ ಡಿಸೇಬಲ್ಡ್ (ಐ.ಇ.ಡಿ) ಪ್ರಕಾರದ ಕಲಿಕೆ ಯೋಜನೆ ಮೂಲಕ ಇವರು ಶಿಕ್ಷಣ ನಡೆಸುತ್ತಿದ್ದಾರೆ. ಇತರ ವಿದ್ಯಾರ್ಥಿಗಳು ಕಲಿಯುತ್ತಿರುವ ಎಲ್ಲ ವಿಷಯಗಳನ್ನು ಇವರು ಅ`À್ಯಯನ ನಡೆಸುತ್ತಿದ್ದಾರೆ. ಗಣತದ ಬದಲು ಪ್ರತ್ಯೇಕ ಕಂಪ್ಯೂಟರ್ ಪಠ್ಯ ಪದ್ಧತಿಯೊಂದು ಇವರ ಕಲಿಕೆಯಲ್ಲಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನದ ಕಲಿಕೆಯೂ ಇವರಿಗಿದೆ.
ಇವರು ಸ್ಕ್ರೈಬ್‍ನ ಸಹಾಯದೊಂದಿಗೆ ಪರೀಕ್ಷೆ ಬರಿದಿದ್ದರು. ಒಂದರಿಂದ ಹತ್ತನೇ ತರಗತಿ ವರೆಗೆ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಸತಿ ಹೂಡಿ ಕಲಿಕೆ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ 7 ನೇ ತರಗತಿ ಕಲಿತು ನಂತರ ಪ್ರೌಢಶಾಲೆ ಕಲಿಕೆ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಸಾಲೆಯಲ್ಲಿ ನಡೆಸಲಾಗುತ್ತದೆ. ಕಾಸರಗೋಡು ಅಲ್ಲದೆ ತ್ರಿಶೂರು, ಕೋಟಯಂ, ತಿರುವನಂತಪುರ ಜಿಲ್ಲೆಗಳಲ್ಲಿ ಸರಕಾರಿ ಅಂಧ ವಿದ್ಯಾಲಯಗಳಿವೆ.