ಮಧೂರು: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ವಾರ್ಷಿಕ ಮಹಾಸಭೆ ಜೂನ್ 2 ರಂದು ಮಧೂರು ಪರಕ್ಕಿಲ ಶ್ರೀ ಮಹಾದೇವ ಶಾಸ್ತಾರ ವಿನಾಯಕ ದೇವಾಲಯದ ನಟರಾಜ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹ ಸಂಕಲ್ಪ, 108 ತೆಂಗಿನ ಕಾಯಿಯ ಮಹಾಗಣಪತಿ ಯಾಗ, 9.30 ಕ್ಕೆ ಪ್ರತಿನಿಧಿಗಳ ನೋಂದಾವಣೆ, ಮಧ್ಯಾಹ್ನ 12 ಕ್ಕೆ ಯಾಗದ ಪೂರ್ಣಾಹುತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 12.40 ಕ್ಕೆ ಪ್ರಸಾದ ಭೋಜನ ನಡೆಯಲಿದೆ.
ಅಪರಾಹ್ನ 2 ಕ್ಕೆ ಸಭಾದ ಮಹಾಸಭೆ ವಲಯ ಸಮಿತಿ ಅಧ್ಯಕ್ಷ ಎಂ.ವೇಣುಗೋಪಾಲ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಮುಖ್ಯ ಅತಿಥಿಯಾಗಿ ಸಭಾದ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು, ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ್ ಅಲೆವೂರಾಯ ಭಾಗವಹಿಸುವರು. ಎಸ್‍ಎಸ್‍ಎಲ್‍ಸಿ ಹಾಗು ಪ್ಲಸ್ ಟುವಲ್ಲಿ ವಿಶೇಷ ಅಂಕಗಳನ್ನು ಗಳಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಈ ಸಂದರ್ಭ ನಡೆಯಲಿದೆ.