ಮಂಜೇಶ್ವರ: ಕೊಡ್ಲಮೊಗರು ಸಮೀಪದ ಬೋಳ್ನ ಶ್ರೀ ಬೋಳ್ನಾಡು ಮಲರಾಯ ಮಹಮ್ಮಾಯೀ ದೈವಸ್ಥಾನದ ಬ್ರಹ್ಮಕಲಶೋತ್ಸವದ ವಾರ್ಷಿಕ ದಿನ ಹಾಗು ವರ್ಷಾವಧಿ ಮಾರಿ ಪೂಜೆ ಮೇ 14 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 14 ರಂದು ಬೆಳಿಗ್ಗೆ 10.30 ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 12 ಕ್ಕೆ ಶ್ರೀ ಮಲರಾಯ ಮಹಮ್ಮಾಯಿ ಅಮ್ಮನವರಿಗೆ ಕಲಶಾಭಿಷೇಕ, 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 7 ರಿಂದ ಭಜನಾ ಕಾರ್ಯಕ್ರಮ, 9 ಕ್ಕೆ ಶ್ರೀ ಮಲರಾಯ ಮಹಮ್ಮಾಯೀ ಬೈರವಾದಿಗಳಿಗೆ ವಿಶೇಷ ಪೂಜೆ, 9.30 ಕ್ಕೆ ಅನ್ನಸಂತರ್ಪಣೆ, 10 ರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.